ರಾಯಚೂರಿನ ಸಿಂಧನೂರು ತಾಲೂಕಿನ ಕೆ.ಹಂಚಿಕಾಳ ಕ್ಯಾಂಪ್ ಪ್ರದೇಶದಲ್ಲಿ ಆರೇಳು ಬೀದಿನಾಯಿಗಳು ಮನೆ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ ದಾಳಿ ಮಾಡಿವೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದೆ.
ಅನಂ ನಾಯಿಗಳ ದಾಳಿಗೆ ಬಲಿಯಾದ ಮಗು. ನಿದ್ದೆಯಿಂದ ಎದ್ದು ಹೊರಗಡೆ ಬಂದಿದ್ದ ಮಗು ಮನೆ ಮುಂದೆ ಆಟವಾಡುತ್ತಿತ್ತು. ಆರೇಳು ಬೀದಿ ನಾಯಿಗಳು ಏಕಕಾಲಕ್ಕೆ ದಾಳಿ ನಡೆಸಿ ಎಳೆದಾಡಿ ಮನಬಂದಂತೆ ಕಚ್ಚಿವೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿ ಸಾವು
ರಾಯಚೂರಿನ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ನವ ವಿವಾಹಿತ ವಕೀಲ ಮೃತಪಟ್ಟಿರುವ ಘಟನ ನಡೆದಿದೆ.
30 ವರ್ಷದ ಹನೀಫ್ ಮೃತಪಟ್ಟವರು. ಕೃಷಿ ಹೊಂಡದಲ್ಲಿನ ಹೂಳಿನ ಬಗ್ಗೆ ತಿಳಿಯದೇ ಈಜಲು ಜಿಗಿದಿದ್ದಾರೆ. ಹೂಳಿನಲ್ಲಿ ಸಿಕ್ಕುಹಾಕಿಕೊಂಡು ಮೃತಪಟ್ಟಿದ್ದಾರೆ. ಗ್ರಾಮಸ್ಥರು ಮೃತದೇಹ ಹೊರತೆಗೆದಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


