ಮಮತಾ ಬ್ಯಾನರ್ಜಿ ಈಗ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಕಾಂಗ್ರೆಸ್ ನಾಯಕರ ಮನೆ ಬಾಗಿಲಿನ ಕದ ತಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾರ್ಟಿಗೂ ಬೇಕಿರುವುದು ಇದೇ ! ಎರಡು ತಿಂಗಳ ಹಿಂದೆ ದೀದಿ ತನ್ನ ಈ ಘೋರ ಪರಾಭವವನ್ನು ನಿರೀಕ್ಷಿಸಿರಲಿಲ್ಲ, ಮಿಗಿಲಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಿತವಚನಗಳನ್ನು ಮಮತಾ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.
ವಿಧಾನಸಭೆ ಚುನಾವಣೆಯ ಘೋರ ಪರಾಜಯದ ಬಳಿಕ ಬಳಲಿದ ಮಮತಾ ಬ್ಯಾನರ್ಜಿ, ಇದು ದೀದಿಗೆ ಮೊದಲ ರಾಜಕೀಯ ಮಹಾ ಸೋಲು . ಒಂದು ಸೋಲಿನಿಂದ ತನ್ನಪರಮಾಪ್ತರು ಮತ್ತು ಬೆಂಬಲಿಗರು ಅದೆಷ್ಟು ದೂರ ಸರಿಯುವರು, ಎದುರಾಳಿ ಅದೆಂತರ ಪ್ರಬಲ ಅಸ್ತ್ರಗಳನ್ನು ಬೀಸುವರೆಂಬುದಕ್ಕೆ ತೃಣಮೂಲ ಕಾಂಗ್ರೆಸ್ ಪಾ:ಳೆಯದಲ್ಲಿ ಈಗ ನಡೆದಿರುವ ಘಟನೆಗಳೇ ನಿದರ್ಶನ. ಸೋತ ಸಮಯದಲ್ಲಿಯೆ ನಿಜವಾದ ನಾಯಕನ ಶಕ್ತಿ ಸಾಬೀತಾಗುವುದು. ಈ ಮಾತಿನಲ್ಲಿ ಅತಿಶಯವೆಲ್ಲಿ ?
ಕಳೆದ ಲೋಕಸಭೆ ಚುನಾವಣೆಯಲ್ಲಿ ತೃಣಮೂಲದಿಂದ ಗೆದ್ದವರು ಈಗ ಬಣ್ಣ ಬದಲಿಸಿದ್ದಾರೆ. ಇವರು ಬಣ್ಣ ಬದಲಿಸಿದರೆಂಬುದಕ್ಕಿಂತ ದಿಲ್ಲಿ ಕಮಲಾಧಿಪತಿಗಳು ಇವರ ಬಣ್ಣ ಬದಲಿಸಲು ಅಮಿತೋತ್ಸಾಹ ತೋರಿರುವುದು ಗಮನಾರ್ಹ. ಒಂದು ವರ್ಷದ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ ಬಣದಲ್ಲಿ ಆಗಿದ್ದೇ ಇಂದು ತೃಣಮೂಲ ಪಾಳೆಯದಲ್ಲಿ ಸಂಭವಿಸಿದೆ. ಒಟ್ಟಿನಲ್ಲಿ ಬಿಜೆಪಿ ಅಗ್ರ ನೇತಾರರಿಗೆ ಪ್ರಾದೇಶಿಕ ಪಕ್ಷಗಳು ತಲೆಯತ್ತಿ ನಿಲ್ಲಬಾರದು. ದೇಶದಲ್ಲಿ ಈ ಪಕ್ಷಗಳ ಅಸ್ತಿತ್ವ ಮತ್ತು ಪ್ರಾಬಲ್ಯ ಕುಸಿದಷ್ಟೂ ಇದು ರಾಜಕೀಯವಾಗಿ ಬಿಜೆಪಿಗೆ ಬಲು ಲಾಭ. ಇದಕ್ಕಾಗಿಯೆ ಬಿಜೆಪಿ ತನ್ನ ರಾಷ್ಟ್ರೀಯ ದಾಳವನ್ನು ದೇಶದ ಜನತೆಯ ಮುಂದೆ ಪದೇ ಪದೇ ಎಸೆದು ತನ್ನ ಬೇಳೆ ಬೇಯಿಸಿಕೊಳ್ಳುವುದು.
ಮಮತಾ ಬ್ಯಾನರ್ಜಿ ಈಗ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಕಾಂಗ್ರೆಸ್ ನಾಯಕರ ಮನೆ ಬಾಗಿಲಿನ ಕದ ತಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾರ್ಟಿಗೂ ಬೇಕಿರುವುದು ಇದೇ , ಎರಡು ತಿಂಗಳ ಹಿಂದೆ ದೀದಿ ತನ್ನ ಈ ಘೋರ ಪರಾಭವವನ್ನು ನಿರೀಕ್ಷಿಸಿರಲಿಲ್ಲ, ಮಿಗಿಲಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಿತವಚನಗಳನ್ನು ಮಮತಾ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ತೃಣಮೂಲ ಪಾಳೆಯದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡಿದಾಗ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವ ಎನ್‌ಡಿಯೇತರ ಪಾರ್ಟಿಯೂ ಮಮತಾ ನೆರವಿಗೆ ಬರಲು ಸಾಧ್ಯವಿಲ್ಲದಂತಹ ರಾಜಕೀಯ ಪರಿಸ್ಥಿತಿ ದೇಶದಲ್ಲಿದೆ.
ರಾಷ್ಡ್ರ ರಾಜಕಾರಣಕ್ಕೆ ಪ್ರವೇಶಿಸಬೇಕೆಂಬ ಬಯಕೆಯ ಹಿಂದೆ ಮಮತಾ ಈಗ ಕಾಂಗ್ರೆಸ್ ನಾಯಕರ ಸಖ್ಯ ಕೋರಿರುವುದು ಗಮನಾರ್ಹ. ಇದೇ ವೇಳೆ ಮಮತಾ ರಾಜ್ಯಸಭೆಗೂ ಪ್ರವೇಶಿಸಿದ ಹಾಗೆ ಈ ಪಾರ್ಟಿಯೊಳಗೆ ಆಂತರಿಕ ಬಂಡಾಯ ಹುಟ್ಟು ಹಾಕಿ ಕಮಲಾಧಿಪತಿಗಳು ವ್ಯೂಹವನ್ನು ರಚಿಸಿರುವುದು ಗಮನಾರ್ಹ. ಕಾಂಗ್ರೆಸ್ ಅಗ್ರ ನಾಯಕ ರಾಹುಲ್‌ಗಾಂಧಿ ಈಗ ಮಮತಾಗೆ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವನ್ನು ನೀಡಲು ಮುಂದಾಗಿದ್ದಾರೆ. ಅಲ್ಲದೆ ತೃಣಮೂಲವನ್ನು ಕಾಂಗ್ರೆಸ್ ಪಾರ್ಟಿಯಲ್ಲಿ ವಿಲೀನಗೊಳಿಸಲು ಸಲಹೆ ಮಾಡಿದ್ದಾರೆ. ವಂಗನಾಡಿನಲ್ಲಿ ಮೂರು ಸಾರಿ ಅಧಿಕಾರ ನಡೆಸಿದ ತೃಣಮೂಲ ಈಗಿನ ಕೇವಲ ಒಂದು ಸೋಲಿನಿಂದ ಪಕ್ಷವನ್ನೇ ವಿಲೀನಗೊಳಿಸಲು ತೀರ್ಮಾನಿಸುವುದೇ ಎಂಬುದು ಗಂಭೀರ ಪ್ರಶ್ನೆ. ಒಟ್ಟಿನಲ್ಲಿ ಪಂಚ ರಾಜ್ಯಗಳ ಚುನಾವಣೆ ಬಳಿಕ ಬಿಜೆಪಿ ಗೇಮ್ ಪ್ಲಾನ್ ಬದಲಾಗಿದೆ. ಎದುರಾಳಿ ದುರ್ಬಲವಾದಾಗಲೇ ಶಕ್ತಿಯನ್ನು ನಿಶಕ್ತ ಗೊಳಿಸಬೇಕೆಂಬ ಸೂತ್ರವನ್ನು ಮೋದಿ ಮತ್ತು ಷಾ ತೃಣಮೂಲ ವಿಚಾರದಲ್ಲಿ ಈಗ ಬಿಗಿಗೊಳಿಸಿರುವುದು ಸ್ಪಷ್ಟ.


