Menu

ಹಂಗಾಮಿ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನ

ರಾಜ್ಯಸಭೆ ಸದಸ್ಯತ್ವದ ಆಹ್ವಾನ ನಿರಾಕರಿಸಿರುವ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನ ನೀಡಿ ಗೌರವಿಸಿದೆ.

ಸಿದ್ದರಾಮಯ್ಯನವರನ್ನು ಸಿಡಬ್ಲ್ಯುಸಿ ಸದಸ್ಯರಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ. ಕಾರ್ಯಕಾರಿ ಸಮಿತಿ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿ, ಪಕ್ಷದ ಪ್ರಮುಖ ರಾಜಕೀಯ ಕಾರ್ಯತಂತ್ರಗಳ ಅಂತಿಮ ನಿರ್ಧಾರ ಈ ಸಮಿತಿ ಸಭೆಯಲ್ಲಿ ಆಗುವುದು. ಹೀಗಾಗಿ ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನ ನೀಡಲಾಗಿದೆ.

ಕಾರ್ಯಕಾರಿ ಸಮಿತಿಯು ರಾಷ್ಟ್ರಮಟ್ಟದಲ್ಲಿ ಪಕ್ಷದ ನೀತಿ, ಸಂಘಟನೆ, ಪ್ರಚಾರದ ಕುರಿತು   ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.  ರಾಷ್ಟ್ರಮಟ್ಟದಲ್ಲಿ ಪ್ರಭಾವ ಹೊಂದಿದೆ.

ಸಿದ್ದರಾಮಯ್ಯ ಅವರು  ರಾಜ್ಯ ಸಭೆ ಸದಸ್ಯತ್ವದ ಆಹ್ವಾನ ನಿರಾಕರಿಸಿದ ಬಳಿಕ ತಮ್ಮ ಪತ್ನಿಗೆ  ಅವಕಾಶ ನೀಡುವುದಾಗಿ ಹೇಳಿದರೂ  ಸಿದ್ದರಾಮಯ್ಯ ಬೇಡ ಎಂದು ಹೇಳಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಸ್ಥಾನ ತ್ಯಜಿಸಿದ್ದಾರೆ.  ಹೈಕಮಾಂಡ್‌ ಎದುರು  ತಮ್ಮ ಮಗನಿಗೂ ಯಾವುದೇ ಹುದ್ದೆಯ ಬೇಡಿಕೆ ಇಟ್ಟಿಲ್ಲ ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *