Menu

ವಿಜಯಪುರದಲ್ಲಿ ಗುಂಡಿಕ್ಕಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಹತ್ಯೆ

ವಿಜಯಪುರ ಹೊರವಲಯದ ಅಲಿಯಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಜೊತೆಗೆ ಕೃಷಿಕನಾಗಿದ್ದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ರಾಜು ಕಡೆ ಗುಂಡಿನ ದಾಳಿಗೆ ಬಲಿಯಾದ ವ್ಯಕ್ತಿ. ಆತ ಕಾರಿನಲ್ಲಿ ವಿಜಯಪುರದತ್ತ ಬರುತ್ತಿರುವಾಗ ಹಂತಕರು ಎದುರಿನಿಂದ ಟಿಪ್ಪರ್‌ ಗುದ್ದಿಸಿದ್ದಾರೆ. ಕಾರಿನ ಡೋರ್ ಓಪನ್ ಆಗದಿದ್ದಾಗ ಕಲ್ಲು ಎತ್ತಿ ಹಾಕಿದ್ದಾರೆ. ಕಾರಿನ ಮೇಲೆ ಗುಂಡುಗಳನ್ನು ಹಾರಿಸಿದ್ದಾರೆ.

ಹಂತಕರು ರಾಜುವಿನ ದಿನನಿತ್ಯದ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಮಧ್ಯಾಹ್ನ ಎರಡು ಗಂಟೆಗೆ ರಾಜು ಏಕಾಂಗಿಯಾಗಿ ಬರುವುದು ತಿಳಿದುಕೊಂಡು ದಾಳಿ ಮಾಡಿದ್ದಾರೆ. ಆಸ್ತಿಗೆ ಸಂಬಂಧಿಸಿದ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ ಕೂಡ ಆಸ್ತಿಗಾಗಿ ಗಲಾಟೆ ನಡೆದಿತ್ತು. ಹತ್ಯೆಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ರಾಜು ಪತ್ನಿ ಇಟಾಬಾಯಿ ಆಗ್ರಹಿಸಿದ್ದಾರೆ.

ವಿಜಯಪುರ ಗ್ರಾಮೀಣ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಬೆಂಗಳೂರಿನ ನೆಲಮಂಗಲದ ಮೋಟಗಾನಹಳ್ಳಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಜೀವಿತಾ (35) ಮೃತಪಟ್ಟಿರುವ ಮಹಿಳೆ.

ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಜೀವಿತಾ ಶವ ಪತ್ತೆಯಾಗಿದೆ. ಆರು ವರ್ಷದ ಹಿಂದೆ ವಿನಯ್ ಕುಮಾರ್ ಎಂಬವರ ಜೊತೆಗೆ ಜೀವಿತಾ ಮದುವೆಯಾಗಿದ್ದರು. ಇವರಿಗೆ ಒಂದೂವರೆ ವರ್ಷದ ಒಂದು ಮಗು ಇದೆ. ಜೀವಿತಾ ಕುಟುಂಬಸ್ಥರು ಗಂಡನ ಕಿರುಕುಳ ಎಂದು ಆರೋಪಿಸಿದ್ದಾರೆ. ತಾವರೆಕೆರೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *