Saturday, February 28, 2026
Menu

ಕಾರು ಚಲಾಯಿಸಿ ವ್ಯಕ್ತಿಯ ಹತ್ಯೆ: ಮೂವರು ವಿದ್ಯಾರ್ಥಿಗಳ ಬಂಧನ

ರಾಜ್ಯದ ಗಡಿಭಾಗ, ಬೆಂಗಳೂರು ಸಮೀಪವಿರುವ ತಮಿಳುನಾಡಿನ ಹೊಸೂರು ನಗರದಲ್ಲಿ ಕುಡಿದ ನಶೆಯಲ್ಲಿ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದಾರೆ. ಹೊಸೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಶಿವಮೂರ್ತಿ (54) ಕೊಲೆಯಾದವರು. ಆರೋಪಿಗಳಾದ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಬಂಧಿತರು. ಬಂಧಿತರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಮೊದಲು ವಾಹನವೊಂದಕ್ಕೆ ಗುದ್ದಿದ್ದು, ನಂತರ ಉದ್ದೇಶಪೂರ್ವಕವಾಗಿ ಶಿವಮೂರ್ತಿ (54) ಎಂಬವರ ಮೇಲೆ ಕಾರು ಹರಿಸಿದ್ದಾರೆ.

ಶಿವಮೂರ್ತಿ ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿ, ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್. ಮನೆ ಮುಂದೆ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕುಪಿತಗೊಂಡ ಶಿವಮೂರ್ತಿ ಮತ್ತು ಕುಟುಂಬಸ್ಥರು ಮನೆಯಿಂದ ಹೊರಬಂದು ಪ್ರಶ್ನಿಸಿದಾಗ ವಾಗ್ವಾದ ಜೋರಾಗಿದೆ. ಆರೋಪಿಗಳು ಏಕಾಏಕಿ ಕಾರನ್ನು ಶಿವಮೂರ್ತಿ ಮೇಲೆ ಚಲಾಯಿಸಿದ್ದಾರೆ.

ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಅಸು ನೀಗಿದ್ದು, ಅವರ ಮಗ, ಸೊಸೆ ಮತ್ತು ಮೊಮ್ಮಗ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *