ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲು 9ನೇ ತರಗತಿಯ ಬಾಲಕನಿಗೆ 100 ರೂ ಸುಪಾರಿ ನೀಡಿರುವ ಆತಂಕಕಾರಿ ಪ್ರಕರಣ ಬಹಿರಂಗಗೊಂಡಿದೆ.
ಸುಪಾರಿ ಪಡೆದಿದ್ದ ಬಾಲಕ ಈ ವಿಚಾರವನ್ನು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾನೆ. ಹೀಗಾಗಿ ದುರಂತ ತಪ್ಪಿದೆ. ಪ್ರಕರಣದಲ್ಲಿ ಆರೋಪಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪ್ರಿನ್ಸಿಪಾಲ್ ಮತ್ತು ಇಬ್ಬರು ಶಿಕ್ಷಕಿಯರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ವಿಷಯ ಬಹಿರಂಗವಾದ ಬಳಿಕ ಇದೀಗ ಮೂವರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾಲಕ ರಿಪೋರ್ಟ್ ಕಾರ್ಡಿನಲ್ಲಿ ಪೋಷಕರ ನಕಲಿ ಸಹಿ ಮಾಡಿದ್ದ ಎಂದು ವಿದ್ಯಾರ್ಥಿನಿ ಶಿಕ್ಷಕರಿಗೆ ದೂರು ನೀಡಿದ್ದಳು. ಇದಕ್ಕೆ ಸಿಟ್ಟಿಗೆದ್ದ ಬಾಲಕ, ಆಕೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲು 9ನೇ ಕ್ಲಾಸ್ ಹುಡುಗನಿಗೆ 100 ರೂ. ಸುಪಾರಿ ನೀಡಿದ್ದ.