students psychology
ಬದುಕಿನ ಭವಿಷ್ಯ ಬರೆದಾಗಿದೆ, ಪರೀಕ್ಷೆಗೆ ಹೆದರದಿರಿ!
ಹುಟ್ಟಿಸಿದವನು ಹುಲ್ಲು ಮೇಯಿಸದೆ ಇರುವನೇ? ಚೆನ್ನಾಗಿ ಓದಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಫಲಾಫಲವನ್ನು ಆ ದೇವರಿಗೆ ಬಿಡಿ. ಪಾಸು-ಫೇಲುಗಳ ಚಿಂತೆ ಬೇಡ. ಏನೇ ಬಂದರೂ, ನಗುತ್ತಾ ಸ್ವೀಕರಿಸಿ. ಆಗುವುದೆಲ್ಲ ಒಳ್ಳೆಯದಕ್ಕೆ. ನೆನಪಿರಲಿ ನಿಮ್ಮ ಫೇಲು ಸಹ ಭವಿಷ್ಯವನ್ನು ಉಜ್ವಲ ದಿಕ್ಕಿಗೆ ಕರೆದುಕೊಂಡು ಹೋಗುವುದಿದೆ. ಜೀವನದಲ್ಲಿ ನೂರೆಂಟು ಪರೀಕ್ಷೆಗಳು ಎದುರಾಗುತ್ತವೆ. ಯಾವುದಾದರೊಂದು ಯಶಸ್ವಿ ಆದರೆ ಸಾಕು ಬದುಕು ಬಂಗಾರ… ಮಾರ್ಚ್ – ಏಪ್ರಿಲ್ ತಿಂಗಳು ಮಕ್ಕಳಿಗೆ ಪರೀಕ್ಷಾ ಕಾಲ. ಪರೀಕ್ಷೆಗಳು ಮುಗಿಯುವವರೆಗೂ


