Menu

ಬುಡುಬುಡುಕೆಯವನೆಂದು ನಂಬಿಸಿ ಸಾವಿನ ಕಂಟಕ ಪರಿಹರಿಸುವುದಾಗಿ ಹೇಳಿ ಚಿನ್ನ ದೋಚಿ ಪರಾರಿ

ಬೆಂಗಳೂರಿನಲ್ಲಿ ಬುಡುಬುಡುಕೆಯವನೆಂದು ಹೇಳಿಕೊಂಡು ನಂಬಿಸಿದ ವ್ಯಕ್ತಿ, ಗರ್ಭಿಣಿಗೆ ‘ನಿಮ್ಮ ಮನೆಯಲ್ಲಿ ದೋಷವಿದೆ, ಸಾವಿನ ಕಂಟಕ ಇದೆ’ ಎಂದು ಹೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಮೋಹನ್ ಎಂಬವರ ಮನೆಗೆ ಬುಡುಬುಡುಕೆಯವನ ವೇಷದಲ್ಲಿ ಬಂದ ವ್ಯಕ್ತಿ, ಅವರ ಪತ್ನಿ ಉಷಾ ಗರ್ಭಿಣಿಯಾಗಿರುವುದನ್ನು ಗಮನಿಸಿ ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ಉಚಿತವಾಗಿ ಪೂಜೆ ಮಾಡುವುದಾಗಿ ಹೇಳಿ ಮನೆಯೊಳಗೆ ಬಂದಿದ್ದಾನೆ. ಪೂಜೆಗಾಗಿ ಕುಡಿಕೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ

ಕೆಲಸಕ್ಕಿದ್ದ ಮನೆಯಿಂದ 220 ಗ್ರಾಂ ಚಿನ್ನ ಕಳವುಗೈದ ಮಹಿಳೆ ಅರೆಸ್ಟ್‌

ಬೆಂಗಳೂರಿನ ಕೋಣನಕುಂಟೆಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅಲ್ಲಿಂದ ಒಂದೊಂದೇ ಚಿನ್ನಾಭರಣ ಎಗರಿಸಿ ಒಟ್ಟು ೨೨೦ ಗ್ರಾಂ ಚಿನ್ನವನ್ನು ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಅದರಿಂದ ತಮಿಳುನಾಡಿನಲ್ಲಿ ಸೈಟ್ ಖರೀದಿಸಿದ್ದಾಳೆಂದು ಹೇಳಲಾಗಿದೆ. ಆಕೆಯನ್ನು

ಪಕ್ಕದ ಮನೆಯ ಸ್ನೇಹಿತೆಯನ್ನೇ ಕೊಲೆಗೈದು ಚಿನ್ನ ಎಗರಿಸಿದ ಮಹಿಳೆ

ಮೈಸೂರಿನ ಕೆಸಿ.ಬಡಾವಣೆಯಲ್ಲಿ ಚಿನ್ನದ ಸರಕ್ಕಾಗಿ ತನ್ನ ಸ್ನೇಹಿತೆಯನ್ನೇ ಮಹಿಳೆ ಕೊಂದ ಘಟನೆ ಮಾ.5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು. ಅದೇ ಬಡವಾಣೆಯ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ