Sunday, September 13, 2026
Menu

ಯಲಹಂಕ ಲಾಡ್ಜ್‌ನಲ್ಲಿ ಮೂರು ಮಕ್ಕಳ ತಾಯಿ, ಯುವಕ ಬೆಂಕಿಗಾಹುತಿ: ಅಕ್ರಮ ಸಂಬಂಧ ಕಾರಣವಾಯ್ತಾ?

ಯಲಹಂಕ ನ್ಯೂಟೌನ್‌ನ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್‌ನಲ್ಲಿರುವ ಲಾಡ್ಜ್‌ನಲ್ಲಿ ಗುರುವಾರ ಮೂರು ಮಕ್ಕಳ ತಾಯಿ ಕಾವೇರಿ ಮತ್ತು ರಮೇಶ್‌ ಬೆಂಕಿಗೆ ಆಹುತಿಯಾಗಿರುವ ಪ್ರಕರಣಕ್ಕೆ ಅಕ್ರಮ ಸಂಬಂಧ ಕಾರಣ ಎಂಬ ಅಂಶ ಪೊಲೀಸ್‌ ವಿಚಾರಣೆಯಲ್ಲಿ ಬಯಲಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮತ್ತು ಗದಗ ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಕಾವೇರಿ ಬಡಿಗೇರ್‌ಗೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದರು. ರಮೇಶ್ ಜೊತೆಗೆ ಆಕೆ ಅಕ್ರಮ ಸಂಬಂಧವನ್ನು ಹೊಂದಿದ್ದರು ಎಂದಬುದು ಬಯಲಾಗಿದೆ.