Menu

ಡಾ. ಕೃತಿಕಾ ಕೊಲೆ ಪ್ರಕರಣ: ಮಹೇಂದ್ರ ರೆಡ್ಡಿ ಖುದ್ದು ಡ್ರಗ್ಸ್ ಖರೀದಿ

ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವೈದ್ಯ ಮಹೇಂದ್ರ ರೆಡ್ಡಿ ಪೊಲೀಸ್‌ ವಿಚಾರಣೆಯಲ್ಲಿ ತಾನು ಆಕೆಗೆ ಅನಸ್ತೇಷಿಯಾ ನೀಡಿ ಕೊಲೆ ಮಾಡಿರುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದಾನೆ. ತಾನೇ ಖುದ್ದಾಗಿ ಮೆಡಿಕಲ್‌ ಶಾಪ್‌ಗೆ ತೆರಳಿ ಡ್ರಗ್ಸ್‌ ಖರೀದಿಸಿರುವುದಾಗಿಯೂ ಪೊಲೀಸರಿಗೆ ತಿಳಿಸಿದ್ದಾನೆ. ವಿಷಯ ಮುಚ್ಚಿಟ್ಟು ರೋಗಿಷ್ಟೆಯೊಂದಿಗೆ ನನ್ನ ಮದುವೆ ಮಾಡಿರುವ ಆ ಪೋಷಕರ ವಿರುದ್ಧ ಸೇಡು ತೀರಿಸಲು ಹೀಗೆ ಮಾಡಿದ್ದೇನೆ, ಅವರು ನಾನು ಜೀವನದಲ್ಲಿ ಕಂಡಿದ್ದ ಕನಸನ್ನು ನುಚ್ಚುನೂರಾಗಿಸಿದ್ದಾರೆ