Thursday, September 17, 2026
Menu

ಕೌಶಲ್ಯಪೂರ್ಣ ತಂತ್ರಜ್ಞರು, ದಾದಿಯರಿಗಾಗಿ ಕರ್ನಾಟಕ ಕಾರ್ಯಪಡೆಯತ್ತ ಜಪಾನ್‌ ಕಣ್ಣು

ನಾನಾ  ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ ಗಳ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಸ್ಪಷ್ಟಪಡಿಸಿದ್ದು, ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ.  ವೈಟ್-ಕಾಲರ್ ತಜ್ಞರ ಜೊತೆಗೆ, ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯ ಹೆಚ್ಚುತ್ತಿದೆ.