Kannada literature
ಹೆಣ್ಣೊಬ್ಬಳ ಎದೆಯಾಳದ ನೋವಿಗೆ ದನಿಯಾಗುವ ಕತೆಗಳು
ಕನ್ನಡದ ಓದುಗರಿಗೆ ಚಿರಪರಿಚಿತರಾದ ಡಾ.ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಪ್ರಸ್ತುತ ಸರಳಾದೇವಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಮಾಧಿ ಮೇಲಿನ ಹೂ, ಉರಿವ ಬೆಂಕಿಗೆ ಮೈಯೆಲ್ಲ ಬಾಯಿ ಎಂಬ ಎರಡು ಕಥಾ ಸಂಕಲನ ಹೊರತಂದಿರುವ ಇವರು “ಸಮುದ್ರದ ತೆರೆಯ ಸರಿಸಿ” ಎಂಬ ಹೊಸ ಕಥಾ ಸಂಕಲನ


