Menu

ಅಗಲಕೋಟೆಯಲ್ಲಿ ದಾನದ ಜಮೀನು ಗುಳುಂ ಮಾಡಿದ ಕಂಪೆನಿಗಳು: ಕ್ರಮ್ಕಕೆ  ಸಂಸದ ಸುಧಾಕರ್‌ ಆಗ್ರಹ

ಮಾಲೂರು ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗಾಗಿ ದಾನ ಮಾಡಿದ್ದ 50 ಎಕರೆ ಜಮೀನನ್ನು ಎರಡು ಕಂಪನಿಗಳು ಲೂಟಿ ಮಾಡಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ದುರಾಡಳಿತ ಶುರುವಾಗಿ ಮೂರು ವರ್ಷವಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜವಾನನಿಂದ ಆರಂಭವಾಗಿ ಪ್ರಧಾನ ಕಾರ್ಯದರ್ಶಿವರೆಗೂ ಅಕ್ರಮ ನಡೆಯುತ್ತಿದೆ. ಹಣ ಕೊಡದೆ ಯಾರಿಗೂ ವರ್ಗಾವಣೆ, ಬಡ್ತಿ ನೀಡುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು