abroad people Guarantee beneficiary
ವಿದೇಶದಲ್ಲಿರುವವರೂ ಕರ್ನಾಟಕದ “ಗ್ಯಾರಂಟಿ” ಲಾಭ ಪಡೆಯುತ್ತಿದ್ದಾರ?
ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ ಎಂಬ ವಿಚಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಗೊಂಡಿದೆ, ಒಂದು ವೇಳೆ ವಿದೇಶದಲ್ಲಿರುವವರು ಅನುಕೂಲ ಪಡೆದರೆ ಅದು ತಪ್ಪು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ ಎಂದು ಹೇಳಿದರು. ಯಾರು ಹೇಳಿದರು ಎಂದು ನಾನು ಗಮನ ಕೊಡಲಿಲ್ಲ,


