Thursday, January 30, 2025
Menu

ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಧಾನ ಅರ್ಚಕರಾಗಿ ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ

ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲ ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆ ಹೊಂದಿದ್ದು, ಅಲ್ಲಿನ ಪೆರಿಯ ನಂಬಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಅರ್ಚಕ ಬಡೆಕ್ಕರ ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯರಿಗೆ ಲಭಿಸಿದೆ.

ಪೆರಿಯ ನಂಬಿ ಅಥವಾ ಮಹಾ ಪ್ರಧಾನ ಅರ್ಚಕರೆಂದರೆ ಅನಂತ ಪದ್ಮನಾಭ ಸ್ವಾಮಿ ಸಂಸ್ಥಾನದಿಂದ ನೀಡುವ ಕೊಡೆ ಮರ್ಯಾದೆ ಇರುವ ವಿಶೇಷ ಸ್ಥಾನ. ಆರು ತಿಂಗಳ ಹಿಂದೆ ಇಲ್ಲಿಗೆ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡ ಕೊಕ್ಕಡದ ದಿ. ಸುಬ್ರಾಯ ತೋಡ್ತಿಲ್ಲಾಯರ ಮಗ ಬಡೆಕ್ಕರ ಶ್ರೀಸತ್ಯನಾರಾಯಣ ತೋಡ್ತಿ ಲ್ಲಾಯ ಪೆರಿಯ ನಂಬಿ ಕೊಡೆ ಸ್ಥಾನ ಪಡೆದ ಕಿರಿಯವರಲ್ಲಿ ಮೊದಲಿಗರು.

ಯಾವುದೇ ಕಾರಣಕ್ಕೂ ನಾವು ಶ್ರೀ ದೇವರೊಂದಿಗಿನ ನಂಬಿಕೆ ಕೈಬಿಡಬಾರದು. ದೇವರು ನಮಗೆ ಒಂದಲ್ಲೊಂದು ದಿನ ಒಲಿದೇ ಒಲಿಯುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ನಾನೇ. ತಿರುವಾಂಕೂರ್ ಮಹಾರಾಜ ರಾಜವಂಶಜ ಕುಟುಂಬಕ್ಕೆ ನಾನು ಆಬಾರಿ. ಭಕ್ತರು ಒಮ್ಮೆಯಾದರೂ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿಯ ದರ್ಶನವನ್ನು ಪಡೆಯಬೇಕು. ಇದು ನಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಧಿಕಾರವನ್ನು ವಹಿಸಿಕೊಂಡ ನಂತರದಲ್ಲಿ ಕರ್ನಾಟಕದ ಸರ್ವ ಜನರಿಗಾಗಿಯೂ ನಾನು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *