Thursday, January 30, 2025
Menu

ಯಶಸ್ವಿಯಾಗಿ ನಡೆದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್ 2025

ಬೆಂಗಳೂರು: ಭಾರತದಲ್ಲಿ ಸ್ಟೆಮ್ ಶಿಕ್ಷಣ ಒದಗಿಸಲೆಂದೇ ಮೀಸಲಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಟ್ಯಾನ್‌ 90 ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಗಳನ್ನು ಸಲ್ಲಿಸಲು ಆಯೋಜಿಸಿದ್ದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್‌ 2025 (ಸಸ್ಟೇನೇಬಲ್ ಪ್ರಾಜೆಕ್ಟ್ಸ್ ಆಂಡ್ ರಿಸರ್ಚ್ ಚಾಲೆಂಜ್) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಖೋಜ್ ಸಂಸ್ಥೆಯ ನೆರವಿನೊಂದಿಗೆ ಈ ಸ್ಪರ್ಧೆ ನಡೆದಿದೆ.

6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ಸ್ಪರ್ಧೆಗೆ 85 ಶಾಲೆಗಳಿಂದ ಸುಮಾರು 750 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ 26 ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಜನವರಿ 25ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರನ್ನು ಘೋಷಿಸಲಾಯಿತು.

ವಿಜೇತ ಶಾಲೆಗಳು ನಗದು ಬಹುಮಾನಗಳನ್ನು ಪಡೆದವು. ಜೊತೆಗೆ ಮೊದಲ ಸ್ಥಾನ ಪಡೆದ ಶಾಲೆ ₹3,00,000 ಮೌಲ್ಯದ ಸ್ಟೆಮ್ ಲ್ಯಾಬ್ ಅನ್ನು ಗೆದ್ದಿದೆ. ಹೆಚ್ಚುವರಿಯಾಗಿ ಅಗ್ರ ಮೂರು ಶಾಲೆಗಳು ಬೆಂಗಳೂರಿನ ಪ್ರಮುಖ ಡೀಪ್ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಭೇಟಿ ನೀಡುವ ಅವಕಾಶವನ್ನು ಕೂಡ ಪಡೆದಿದೆ.

ಪ್ರಶಸ್ತಿ ಘೋಷಣೆ ಕಾರ್ಯಕ್ರಮದಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್‌ಎ) ನ ಅಧ್ಯಕ್ಷ ಮತ್ತು ಟೆಸ್ಸಾಲ್ವ್‌ ನ ಸಹ-ಸಂಸ್ಥಾಪಕ ಡಾ.ವಿ.ವೀರಪ್ಪನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇನ್ಫೋಸಿಸ್‌ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಮತ್ತು ಶಿಕ್ಷಾಲೋಕಮ್ ನ ಸಂಸ್ಥಾಪಕ ಎಸ್‌ಡಿ ಶಿಬುಲಾಲ್ ಮುಖ್ಯ ಭಾಷಣ ಮಾಡಿದರು. ಅನಿರುದ್ಧ ಬ್ಯಾನರ್ಜಿ (ಸ್ವಿಚಾನ್), ಗದಾಧರ್ ರೆಡ್ಡಿ (ನೋಪೋ ನ್ಯಾನೊಟೆಕ್ನಾಲಜೀಸ್) ಮತ್ತು . ಶಿವ ತೇಜ ಕಾಕಿಲೇಟಿ (ನಿರಮೈ ಹೆಲ್ತ್ ಅನಾಲಿಟಿಕ್ಸ್) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *