Sunday, September 27, 2026
Menu

ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಠಾಪನೆ: ತೆರವುಗೊಳಿಸಿದ ಕಲಬುರಗಿ ಜಿಲ್ಲಾಡಳಿತ

ಕಲಬುರಗಿ ನಗರದ ಹೈಕೋರ್ಟ್ ಕ್ರಾಸ್ ಬಳಿ ರಾತ್ರೋ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಮಾಡಿರುವ ಘಟನೆ ನಡೆದಿದೆ. ಸಿಎಂ ಡಿ.ಕೆ ಶಿವಕುಮಾರ ಅವರು ಕಲಬುರಗಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಈ ಮೂರ್ತಿ ಪ್ರತಿಷ್ಠಾಪಿಸಲಾಗಿದೆಯಾ ಎಂಬ ಆನುಮಾನ ಮೂಡಿದೆ. ಆದರೆ ಯಾವುದೇ ಅನುಮತಿ ಪಡೆಯದೆ ರಾತ್ರೋ ರಾತ್ರಿ ಪ್ರತಿಮೆ ಸ್ಥಾಪನೆ ಮಾಡಲಾದ ಹಿನ್ನೆಲೆಯಲ್ಲಿ ಅದನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ಎರಡ್ಮೂರು ವರ್ಷಗಳ ಹಿಂದೆಯೂ  ರಾತ್ರಿ ಸಿದ್ದರಾಮಯ್ಯ ಭಾವಚಿತ್ರದ

ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್ ನಿಂದ: ಸಿಎಂ ಡಿಕೆ ಶಿವಕುಮಾರ್‌

ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್‌ನಿಂದ, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರು ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಆಗ ಕಾಂಗ್ರೆಸ್ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಬಂತು.  ಸರ್ದಾರ್ ವಲ್ಲಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು. ಧರಂಸಿಂಗ್

ಕಲ್ಯಾಣ ಕರ್ನಾಟಕಕ್ಕೆ ಮಹತ್ತರ ಯೋಜನೆಗಳ ಘೋಷಿಸಿದ ಮುಖ್ಯಮಂತ್ರಿ

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ  ಮುಖ್ಯಮಂತ್ರಿ  ಡಿಕೆ ಶಿವಕುಮಾರ್  ಆ ಭಾಗದ ಅಭಿವೃದ್ಧಿಗಾಗಿ ಮಹತ್ತರವಾದ  ಹೊಸ  ಯೋಜನೆಗಳನ್ನು ಘೋಷಿಸಿದ್ದಾರೆ. ವಿವರ ಹೀಗಿದೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್ 8 ಕಂಪನಿಯಾಗಿ ಕಲ್ಯಾಣ ಕರ್ನಾಟಕ

ಯುಪಿಐ ಮೇಲಿನ ತೆರಿಗೆ ವಿರುದ್ಧ ದೇಶವೇ ಹೋರಾಟ ಮಾಡಬೇಕು: ಡಿಕೆ ಶಿವಕುಮಾರ್

ಯುಪಿಐ ವಹಿವಾಟಿನ ಮೇಲೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಇಡೀ ದೇಶ ಹೋರಾಟ ನಡೆಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಯುಪಿಐ ವಹಿವಾಟಿನ ಮೇಲೆ

ಕ್ರಿಮಿನಲ್‌ ಹಿನ್ನೆಲೆಯ ಪೊಲೀಸ್‌ ಅಧಿಕಾರಿಯನ್ನು ಸಮರ್ಥಿಸುವ ಸಿಎಂ: ಆರ್‌ ಅಶೋಕ

ದಲಿತರ ಮೇಲೆ ಹಲ್ಲೆ ಮಾಡಿದ, ಹೆಣ್ಣುಮಗಳ ಬದುಕು ಹಾಳು ಮಾಡಿ ಚರಿತ್ರೆ ಇರುವ ಟಿ.ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಪರವಾಗಿ ಮಾತಾಡುತ್ತಾರೆ ಎಂದರೆ ಮುಖ್ಯಮಂತ್ರಿ ಯಾವ ಮಟ್ಟಕ್ಕೆ ಹೋಗಿದ್ದಾರೆ, ನಾನಾದರೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿದ್ದೇನೆ. ಹಿಂದೂಗಳಿಗೆ ಆ ರೀತಿಯ ಸಂದೇಶ ನೀಡಿದರೆ

ಕಾಂಗ್ರೆಸ್‌ ನೂತನ  ಜಿಲ್ಲಾ ಅಧ್ಯಕ್ಷರಿಗೆ ಮಾರ್ಗದರ್ಶನಕ್ಕಾಗಿ ಕೇಂದ್ರ ನಾಯಕರಿಂದ ಸಭೆ: ಸಿಎಂ

ನೂತನವಾಗಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು. ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಸುರ್ಜೇವಾಲ ಅವರು ಆಗಮಿಸಿರುವ ಬಗ್ಗೆ ಕೇಳಿದಾಗ ಅವರು ಈ

ಇಂಜಿನಿಯರ್ ಗಳಿಗೆ ಹೆಸರಿನ ಮುಂದೆ Er. ಬಳಕೆಗೆ ಸಿಎಂ ಆದೇಶ

ಇಂಜಿನಿಯರ್ ಗಳಿಗೆ ವೃತ್ತಿಗೌರವ ನೀಡುವ ಉದ್ದೇಶದಿಂದ ಅವರ ಹೆಸರಿನ ಮುಂದೆ Er. (ಅಭಿಯಂತರ) ಎಂದು ಬಳಸಲು ಆದೇಶ ಹೊರಡಿಸಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ)

ರಾಜ್ಯದಲ್ಲಿ ಗಣಿಗಾರಿಕೆ ಬ್ಲಾಕ್‌ ಹರಾಜು ನಡೆಸಲು ಸುಪ್ರೀಂ ಸಮ್ಮತಿ

ರಾಜ್ಯದ ಕಚ್ಚಾ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಗಣಿಗಾರಿಕೆ ಬ್ಲಾಕ್‌ಗಳನ್ನು ಒಂದೇ ಸಮಗ್ರ ಬ್ಲಾಕ್‌ಗಳಾಗಿ ವಿಲೀನಗೊಳಿಸಿ ಹರಾಜು ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಅರಣ್ಯ ಪ್ರದೇಶವನ್ನು ಹರಾಜು ಬ್ಲಾಕ್‌ಗೆ ಸೇರಿಸಿರುವುದನ್ನೇ ಗಣಿಗಾರಿಕೆಗೆ ಅನುಮತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿಯೂ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್,

ಕುಮಾರಸ್ವಾಮಿ ಏನು ಬೇಕಾದರೂ ಬಿಡುಗಡೆ ಮಾಡಲಿ: ಮುಖ್ಯಮಂತ್ರಿ ತಿರುಗೇಟು

ಯಾರು ಏನು ಬೇಕಾದರು ಮಾತನಾಡಿಕೊಳ್ಳಲಿ, ಚರ್ಚೆ ಮಾಡಲಿ, ಏನಾದರೂ ಬಿಡುಗಡೆ ಮಾಡಿಕೊಳ್ಳಲಿ. ಅವರನ್ನು ಯಾರು ತಡೆಯಲು ಆಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮಗಳು ಪೆನ್ ಡ್ರೈವ್ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದಾಗ ಶಿವಕುಮಾರ್ 

ವಂದೇ ಮಾತರಂ ಬಿಜೆಪಿ ಸ್ವತ್ತಲ್ಲ: ಸಚಿವ ಬೈರತಿ ಕಿಡಿ

ವಂದೇ ಮಾತರಂ ಬಿಜೆಪಿಯ ಆಸ್ತಿಯಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಮಾತರಂ ವಿಚಾರದಲ್ಲಿ ಯಾವುದೇ ವಿವಾದವಿಲ್ಲ ಎಂದರು. ವಂದೇ ಮಾತರಂ ನಮಗೆಲ್ಲರಿಗೂ ಸೇರಿದ್ದು.