Featured
ಹೆಬ್ಬಾಳದಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಸಾವು
ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ನಾಗೇನಹಳ್ಳಿ ನಿವಾಸಿ ಲಿಂಗಮ್ಮ ಎಂದು ಗುರುತಿಸಲಾಗಿದೆ. ಮಹಿಳೆ ಬಸ್ ಇಳಿದು ರಸ್ತೆ ದಾಟುವಾಗ ವೇಗವಾಗಿ ಬಂದಿದ್ದ ಬಿಎಂಟಿಸಿ ಬಸ್ ಡಿಕ್ಕಿಯಾಗಿತ್ತು. ಮಹಿಳೆ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಅಸು ನೀಗಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮೊದಲೇ ತೂಕಡಿಸುವ ಜನಪ್ರತಿನಿಧಿಗಳಿಗೆ ಊಟದ ನಂತ್ರ ರಿಕ್ಲೈನರ್ ಚೇರ್ ಬೇರೆ ಕೊಡ್ಬೇಕಾ
ಅಧಿವೇಶನಗಳಿಗೆ ಹಾಜರಾಗುವುದಕ್ಕಿಂತ ಮಹತ್ವದ ಕೆಲಸ ಶಾಸಕರಿಗೆ ಬೇರಾವುದಿದೆ, ಅದಕ್ಕೂ ಗೈರು ಹಾಜರಾಗಿ ಕಲಾಪಗಳಿಗೆ ಚಕ್ಕರ್ ಹೊಡೆಯುತ್ತಾರೆಂದರೆ ಇವರನ್ನು ಆರಿಸಿ ಕಳಿಸುವ ಪ್ರಮೇಯವಾದರೂ ಏನಿದೆ, ಪ್ರೈಮರಿ ಶಾಲೆಯ ಮಕ್ಕಳು ಕೇವಲ ಎರಡು ಮೂರು ದಿನ ಶಾಲೆಗೆ ಚಕ್ಕರ್ ಹಾಕಿದಲ್ಲಿ ಅವರಿಗೆ ನಾನಾ ರೂಪದ
ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ: ಡಿ.ಕೆ. ಶಿವಕುಮಾರ್
ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮದ ನಂತರ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಕುಂಭಮೇಳ ಹಾಗೂ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿಮ್ಮ
ಬೆಸ್ಕಾಂನಿಂದ ಕಡಿಮೆ ವಿದ್ಯುತ್ ಬಳಸುವ ಬಿಎಲ್ ಡಿಸಿ ಫ್ಯಾನ್ ಲೋಕಾರ್ಪಣೆ
ಬೆಂಗಳೂರು: ಇಂಧನ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಸ್ಕಾಂ, ಕಡಿಮೆ ವಿದ್ಯುತ್ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್ ಅನ್ನು ಗುರುವಾರ ಲೋಕಾರ್ಪಣೆಗೊಳಿಸಿದೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಕ್ರೆಡಲ್ ಸಹಭಾಗಿತ್ವದಲ್ಲಿ ನಡೆದ ಡಿಸ್ಕಾಂಗಳ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮದ ಭಾಗವಾಗಿ ಬೆಸ್ಕಾಂನ
ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚು ಮಾನವೀಯಗೊಳಿಸುತ್ತದೆ: ಸಿಎಂ
ಬೆಂಗಳೂರು: ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಆದ್ದರಿಂದ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ. ಇದನ್ನು
ಪರಿಶಿಷ್ಟ ಜಾತಿ, ಪಂಗಡದ ಹಣ ಬಜೆಟ್ ನಲ್ಲಿಮೀಸಲಿಡಿ: ಶ್ರೀರಾಮುಲು
ಮೈಸೂರು: ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಶೇ24.10ರಷ್ಟು ಹಣ ಮೀಸಲಾಗಿರಿ ಇರಿಸಿ ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದರು. ಮೈಸೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಎಸ್ ಇಪಿ, ಟಿಎಸ್ ಪಿ ಅನುದಾನ
ಆಸ್ಕರ್ ವಿಜೇತ ನಟ ಜೆನೆ ಹ್ಯಾಕ್ ಮನ್, ಪತ್ನಿ ಶವವಾಗಿ ಪತ್ತೆ!
ಹಾಲಿವುಡ್ ದಿಗ್ಗಜ ನಟ ಜೆನೆ ಹ್ಯಾಕ್ ಮನ್ ಮತ್ತು ಪತ್ನಿ ಬೆಟ್ಸೆ ಅರಕಾವಾ ಅಲ್ಲದೇ ಮನೆಯ ನಾಯಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೆನೆ ಹ್ಯಾಕ್ ಮನ್ (95)
ಉತ್ತರ ಭಾರತದ 25 ಭಾಷೆ ನಾಶಗೊಳಿಸಿದ ಹಿಂದಿ: ಎಂಕೆ ಸ್ಟಾಲಿನ್ ಗಂಭೀರ ಆರೋಪ
ಕೇಂದ್ರ ಸರ್ಕಾರ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ತ್ರಿಭಾಷಾ ವಿವಾದ ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಳೆದ 100 ವರ್ಷಗಳಲ್ಲಿ ಉತ್ತರ ಭಾರತದ 25 ಭಾಷೆಗಳನ್ನು ಹಿಂದಿ ಭಾಷೆ ಧ್ವಂಸಗೊಳಿಸಿದೆ ಎಂಬ ಗಂಭೀರ ಆರೋಪದಿಂದ ಮತ್ತೊಂದು ತಿರುವು ಪಡೆದಿದೆ. ಉತ್ತರ
ಜನರಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ನೀರಿನ ಸಮಸ್ಯೆ ಇರುವಾಗ ಪಕ್ಕದ ರಾಜ್ಯಕ್ಕೆ ನೀರು ಹರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಮೀರ್ ಸಾಧಿಕ್‌ನಂತೆ ಜನರಿಗೆ ದ್ರೋಹ ಬಗೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಸುಮಾರು ಒಂದೂವರೆ
ದಕ್ಷಿಣ ಭಾರತದಲ್ಲಿ ಪ್ರತಿಪಕ್ಷಗಳ ಹತ್ತಿಕ್ಕಲು ಕ್ಷೇತ್ರ ಪುನರ್ ವಿಂಗಡನೆ: ಸಿಎಂ ಸಿದ್ದರಾಮಯ್ಯ ಅಸಮಾಧಾನ
ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವಾರ ಮಾಧ್ಯಮ




