Thursday, January 30, 2025
Menu

ಪಿಎಫ್​ಐ ಉಗ್ರರಿಗೆ ದುಬೈ ಹಣ ಹಂಚುತ್ತಿದ್ದಾತ ಎನ್‌ಐಎ ಬಲೆಗೆ

ದುಬೈನಿಂದ ಬರುತ್ತಿದ್ದ ಹಣವನ್ನು ನಿಷೇಧಿತ ಪಿಎಫ್​ಐ ಉಗ್ರ ಸಂಘಟನೆಯ ಕೃತ್ಯಗಳಿಗೆ ಕರ್ನಾಟಕ ಹಾಗೂ ಕೇರಳದ ತಂಡಗಳ ಮೂಲಕ ಹಂಚುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜದ್ ಆಲಂ ಬಂಧಿತ. ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ತನಿಖಾ ತಂಡ ಆತನನ್ನು ಬಂಧಿಸಿದೆ.

ಪಿಎಫ್‌ಐ ತರಬೇತಿ ಪಡೆದ ಕೇಡರ್ ಆಲಂ ವಿರುದ್ಧ ಬಂಧನ ವಿಶೇಷ ಎನ್‌ಐಎ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅವರ ವಿರುದ್ಧ ಲುಕ್‌ಔಟ್ ಸುತ್ತೋಲೆ ಕೂಡ ಹೊರಡಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ.

ಆರೋಪಿ ದುಬೈನಿಂದ ಬಿಹಾರದ ಪಿಎಫ್‌ಐ ಕಾರ್ಯಕರ್ತರಿಗೆ ಬರುತ್ತಿದ್ದ ದುಡ್ಡನ್ನು ಕರ್ನಾಟಕ ಮತ್ತು ಕೇರಳ ಮೂಲದ ತಂಡಗಳ ಮೂಲಕ ತಲುಪಿಸುತ್ತಿದ್ದ. ನಿಷೇಧಿತ ಸಂಘಟನೆಯ ಅಪರಾಧ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಬಳಸಲಾಗಿತ್ತು ಎಂದು ಎನ್ಐಎ ತಿಳಿಸಿದೆ.

ಪಿಎಫ್​ಐ ಕಾರ್ಯಕರ್ತರು ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ 2022 ರ ಜುಲೈನಲ್ಲಿ ಬಿಹಾರದ ಫುಲ್ವಾರಿ ಷರೀಫ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು.

Related Posts

Leave a Reply

Your email address will not be published. Required fields are marked *