Menu

ಚುರುಕಾಗಲಿ ಆಡಳಿತ ಯಂತ್ರಾಂಗ

CM DK Shivakumar
 ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಮತ್ತು ಕರೆಂಟಿನ ಸಮಸ್ಯೆ ಹಾಗೆಯೇ ಇದೆ. ಜಿಲ್ಲಾಡಳಿತ ಮತು ಜಿಲ್ಲಾ ಪಂಚಾಯ್ತಿ ಇದುವರೆಗೆ ಕೈಗೊಂಡ ಕ್ರಮಗಳ ಪರಾಮರ್ಶೆ ಅತಿ ಮುಖ್ಯ. ನೂತನ ಮಂತ್ರಿಮಂಡಲದಲ್ಲಿ ಕಡಿಮೆ ಪ್ರಮಾಣದಲ್ಲಿ ಸಚಿವರಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಜನತೆಯ ಹಿತದೃಷ್ಟಿಯಿಂದ ಮತ್ತು ಹವಾಮಾನದ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಆಡಳಿತವನ್ನು ಮುಖ್ಯಮಂತ್ರಿ ಚುರುಕುಗೊಳಿಸಬೇಕಿದೆ.

ರಾಜ್ಯದಲ್ಲಿ ಕಳೆದ ಮೂರು, ನಾಲ್ಕು ತಿಂಗಳುಗಳಿಂದ ಅಧಿಕಾರ ಹಸ್ತಾಂತರದ ಗಡಿಬಿಡಿ. ಇದರ ಪರಿಣಾಮವಾಗಿ ಆಡಳಿತದಲ್ಲಿ ತುಸು ಆಲಸ್ಯ ಮತ್ತು ವಿಳಂಬ ಆಗಿರುವುದು ನಿಜ. ನಾಡಿಗೆ ಮುಂಗಾರು ಬೇರೆ ಪ್ರವೇಶ . ಇದು ರೈತನ ಮೊಗದಲ್ಲಿ ನಗು ಮೂಡಿಸಿದೆ. ಇದೇ ವೇಳೆ ಮುಂಗಾರುವಿನ ಅವಾಂತರಗಳಿಗೂ ಆಡಳಿತ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಎಚ್ಚೆತ್ತುಕೊಳ್ಳಬೇಕಿದೆ. ಮಳೆಯ ನಂತರ ರೈತನಿಗೆ ಸರಿಯಾದ ಮಾಗದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ದೊರೆಯಬೇಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದೆಯೇ ಎಂಬುದು ಗಮನಾರ್ಹ. ಹಿಂದಿನ ಕೃಷಿ ಮಂತ್ರಿ ರಸಗೊಬ್ಬರದ ಕೊರತೆ ಇಲ್ಲವೆಂದು ಘೋಷಿಸಿದ್ದರೂ ತಾಜಾ iಹಿತಿಯನ್ನು ಈಗಿನ ಕೃಷಿ ಮಂತ್ರಿಗಳೇ ವಿವರಿಸಬೇಕಷ್ಟೆ . ಮಳೆಯಾದ ಒಂದೆರೆಡು ವಾರಗಳ ಅಂತರದಲ್ಲಿ ಹೊಲ ಮತ್ತು ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗುವುದು ಸಹಜ. ಈ ವೇಳೆಯಲ್ಲಿ ನಾಡಿನ ಅನ್ನದಾತನು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಪರಿತಪಿಸುವಂತಾಗಬಾರದು . ಬೀದರ್‌ನಿಂದ ಚಾಮರಾಜನಗರದವರೆಗೆ ಮತ್ತು ಕೋಲಾರದಿಂದ ಕಾರವಾರದವರೆಗೆ ರಸಗೊಬ್ಬರದ ಲಭ್ಯತೆ ಮತ್ತು ಬಿತ್ತನೆ ಬೀಜದ ದಾಸ್ತಾನು ಮತ್ತು ತಾಜಾ ಮಾಹಿತಿಯನ್ನು ಸರ್ಕಾರ ಪಡೆದುಕೊಳ್ಳುವುದು ಲೇಸು. ಈ ವಿಚಾರದಲ್ಲಿ ಯಾವುದೇ ವಿಳಂಬವಾದರೂ ಅದರಿಂದ ಸಾರ್ವತ್ರಿಕವಾಗಿ ಗೊಂದಲ ಪರಿಸ್ಥಿತಿ ನಿರ್ಮಾಣ ವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆಗೂ ಭಂಗ ತರಬಹುದು. ಆದ್ದರಿಂದ ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಈ ಕಡೆ ಲಕ್ಷ್ಯ ವಹಿಸುವುದು ಸರ್ವಸೂಕ್ತ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬದಲಾವಣೆಯೂ ಈಗ ಆಗಬೇಕಿದೆ. ಹೋದ ವಾರವಷ್ಟೆ ಅಸ್ತಿತ್ವಕ್ಕೆ ಬಂದ ಈ ಸರ್ಕಾರದಲ್ಲಿ ಇನ್ನೂ ಉಸ್ತುವಾರಿಗಳ ನೇಮಕಾತಿ ಆಗಿಲ್ಲ. ಇದು ಅಧಿಕಾರಿಗಳು ಮತ್ತು ಮಂತ್ರಿಗಳ ನಡುವೆ ಗಲಿಬಿಲಿ ಸಂವಹನದ ಕೊರತೆಗೆ ದಾರಿಯಾಗಬಾರದು, ಜಿಲ್ಲೆ , ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕುಡಿಯುವ ನೀರು ಮತ್ತು ಕರೆಂಟ್ ಪೂರೈಕೆಯಲ್ಲಿ ಕೆಲವು ಬಗೆಯ ವ್ಯತ್ಯಾಸಗಳಾಗಿವೆ. ಬೇಸಿಗೆಯ ದಗೆ ಮತ್ತು ಬೇಗೆ ಇನ್ನು ಕೆಲವು ಕಡೆ ಮುಂದುವರಿದಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಮತ್ತು ಕರೆಂಟಿನ ಸಮಸ್ಯೆ ಹಾಗೆಯೇ ಇದೆ.

ಜಿಲ್ಲಾಡಳಿತ ಮತು ಜಿಲ್ಲಾ ಪಂಚಾಯ್ತಿ ಇದುವರೆಗೆ ಕೈಗೊಂಡ ಕ್ರಮಗಳ ಪರಾಮರ್ಶೆ ಅತಿ ಮುಖ್ಯ ಮಂತ್ರಿಮಂಡಲದಲ್ಲಿ ಕಡಿಮೆ ಪ್ರಮಾಣದಲ್ಲಿ ಸಚಿವರಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಜನತೆಯ ಹಿತದೃಷ್ಟಿಯಿಂದ ಮತ್ತು ಹವಾಮಾನದ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಆಡಳಿತವನ್ನು ಮುಖ್ಯಮಂತ್ರಿ ಚುರುಕುಗೊಳಿಸಬೇಕಿದೆ. ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಆಡಳಿತ ಯಂತ್ರಕ್ಕೆ ನೂತನ ಮುಖ್ಯಮಂತ್ರಿ ವೇಗ ನೀಡಬೇಕಿದೆ.

Related Posts

Leave a Reply

Your email address will not be published. Required fields are marked *