ಅರಿಶಿಣಪುಡಿಯಲ್ಲಿ ಕಲಬೆರಕೆ ಕುರಿತು ದೂರು ದಾಖಲಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಮಸಾಲೆ ಪೌಡರ್, ಅರಿಶಿಣ ಪುಡಿ ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ಆದೇಶಿಸಿದೆ.
ಅರಿಶಿಣ ಪುಡಿ ಮತ್ತು ಬೇರುಗಳಲ್ಲಿ ಸೀಸದ ಅಂಶ ಕಲಬೆರಕೆ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯಲ್ಲಿ ದೂರು ದಾಖಲಾಗಿದೆ. ಅರಿಶಿಣಪುಡಿ ಮತ್ತು ಮಸಾಲೆ ಪುಡಿ ಗಟ್ಟಿ ಬರಲಿ ಎಂಬ ಕಾರಣಕ್ಕೆ ಕಲಬೆರಕೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜ್ಯಾದ್ಯಂತ ಮಸಾಲೆ ಪುಡಿ, ಅರಿಶಿಣ ಪುಡಿ ಪರೀಕ್ಷೆಗೆ ಒಳಪಡಿಸಲು ಮಾಡಲು ಸರ್ಕಾರ ಆದೇಶ ಮಾಡಿದೆ.
ಅರಿಶಿಣ ಪುಡಿಗೆ ಯಾವುದೋ ಚೆಕ್ಕೆಯ ಪುಡಿ ಮಿಕ್ಸ್ ಮಾಡುತ್ತಿದ್ದಾರೆ, ಈ ಕಲಬೆರಕೆ ಕ್ಯಾನ್ಸರ್‌ಗೆ ಕಾರಣ ಆ ಗುತ್ತದೆ. ಜೊತೆಗೆ ಇತರ ಹಲವು ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ ಎಂದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ವಿವರಿಸಲಾಗಿದೆ.


