Thursday, February 06, 2025
Menu

ಚೀನಾದಲ್ಲಿ ಹೊಸ ವೈರಸ್‌ಗೆ ಜನ ಬಲಿಯಾಗ್ತಿದ್ದಾರ?

ಜಗತ್ತನ್ನೇ ಕಂಗೆಡಿಸಿದ್ದ ಕೊರೊನಾ ವೈರಸ್‌ ಕಾಣಿಸಿಕೊಂಡ 5 ವರ್ಷಗಳ ಬಳಿಕ ಈಗ ಚೀನಾದಲ್ಲಿ ಮತ್ತೊಂದು ವೈರಸ್‌ ವ್ಯಾಪಕವಾಗಿ ಹರಡಿರುವ ಆತಂಕಕಾರಿ ಸುದ್ದಿಯೊಂದು ಹರಿದಾಡುತ್ತಿದೆ.

ಚೀನಾದಲ್ಲಿ ಮೆಟಾಪ್ನ್ಯೂಮೋವೈರಸ್ ಹಬ್ಬಿದ್ದು, ಚೀನಾದ ಜನರ ದಂಡು ಆಸ್ಪತ್ರೆಗೆ ದಾಖಲಾಗುತ್ತಿರುವ ದೃಶ್ಯದ ವೀಡಿಯೋಗಳು ವೈರಲ್‌ ಆಗಿವೆ. ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬೆಳವಣಿಗೆಯ ಬಗ್ಗೆ ಈವರೆಗೆ ಯಾವುದೂ ಅಧಿಕೃತ ಸುದ್ದಿ ಹೊರ ಬಂದಿಲ್ಲ. ವೈರಸ್ ಹರಡುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

SARS-CoV-2 (Covid-19) ಎಕ್ಸ್‌ ಖಾತೆಯೊಂದರಲ್ಲಿ, ಚೀನಾ ಇನ್ಫ್ಲುಯೆನ್ಸ್‌ A, HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳ ಉಲ್ಬಣವನ್ನು ಎದುರಿಸುತ್ತಿದೆ. ಆಸ್ಪತ್ರೆಗಳು ರೋಗಿಗಳು ಮತ್ತು ಸ್ಮಶಾನಗಳು ಮೃತದೇಹಗಳಿಂದ ತುಂಬಿ ಹೋಗಿವೆ ಎಂಬ ಪೋಸ್ಟ್‌ ಪ್ರಕಟವಾಗಿದೆ.

ಚಳಿಗಾಲದಲ್ಲಿ ಕೆಲವು ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ನ್ಯುಮೋನಿಯಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *