Thursday, January 30, 2025
Menu

ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ: ಸುಧಾಕರ್ ಗೆ ವಿಶ್ವನಾಥ್ ಸವಾಲು

ನೀವು ಸಚಿವರಾಗಿದ್ದಾಗ ದುರಂಹಕಾರಿ ತೋರಿಸಿಲ್ಲವೇ? ಶಾಸಕರು, ಸಚಿವರ ಕರೆಗಳನ್ನು ಸ್ವೀಕರಿಸಿದ್ದೀರಾ? ಕೊರೊನಾ ಕಾಲದಲ್ಲಿ ನಿಮ್ಮ ಭ್ರಷ್ಟಾಚಾರದಿಂದ ಪಕ್ಷ ಸೋತಿತು ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮದೇ ಪಕ್ಷದ ಸಂಸದ ಕೆ.ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸುಧಾಕರ್ ಮಾತನಾಡಿದ್ದು ಸರಿಯಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾರೆ ಅಂದರೆ ಅವರು ಹಿರಿಯರು ಇದ್ದಾರೆ. ಕೇಂದ್ರ ಸಚಿವರು ಆಗಿದ್ದಾರೆ. ಪಕ್ಷದಲ್ಲಿ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತು ಉಗಿಯುತ್ತಿದ್ದಾರೆ ಎಂದರು.

ಪಕ್ಷದ ಮುಖಂಡರು ಇಂದು ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡುತ್ತಿರುವುದು ಯಾವುದೋ ಉದ್ದೇಶ ಇಟ್ಟುಕೊಂಡು ಅಲ್ಲ. ಬದಲಿಗೆ ನನಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ನನ್ನ ಕೆಲಸ ಆಗಿರಲಿಲ್ಲ ಮುಂತಾದ ವೈಯಕ್ತಿಕ ಪ್ರತಿಷ್ಠೆಗಾಗಿ ಅಷ್ಟೆ. ಸಮಸ್ಯೆ ಏನೇ ಇದ್ದರೂ ಬನ್ನಿ. ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಅವರು ಮನವಿ ಮಾಡಿದರು.

ಸುಧಾಕರ್ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಈ ರೀತಿ ಮಾತನಾಡಿದ್ದಾರೆ. ನೀವು ಸೂಚಿಸಿದ ವ್ಯಕ್ತಿ ನಿಮ್ಮ ಬಂಧುವೇ? ಚುನಾವಣೆ ನಡೆದು ಆಯ್ಕೆಯಾಗಿದೆ ಹೊರತು ಇದರಲ್ಲಿ ವಿಜಯೇಂದ್ರ ಕೈವಾಡ ಅಥವಾ ನನ್ನ ಕೈವಾಡವಿಲ್ಲ ಎಂದು ವಿಶ್ವನಾಥ್ ಹೇಳಿದರು.

ಸುಧಾಕರ್ ಗೆ ಇಷ್ಟ ಇದ್ದರೆ ಪಕ್ಷದಲ್ಲಿ ಇರಲಿ. ಇಲ್ಲವೇ ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿ. ಅವರು ಯಾವುದೇ ಪಕ್ಷದಿಂದ ನಿಂತರೂ ಯಲಹಂಕದಲ್ಲಿ ಒಂದು ವೋಟು ಹೆಚ್ಚು ಪಡೆದು ಗೆಲ್ಲಲಿ ನೋಡೋಣ ಎಂದು ಅವರು ಸವಾಲು ಹಾಕಿದರು.

ಸಚಿವರಾಗಿದ್ದಾಗ ದುರಂಹಕಾರದಿಂದ ವರ್ತಿಸಿದಿರಿ. ಶಾಸಕರು, ಸಚಿವರ ಫೋನ್ ಕರೆಗಳನ್ನೇ ಸ್ವೀಕರಿಸುತ್ತಿರಲಿಲ್ಲ. ಯಲಹಂಕ ಕ್ಷೇತ್ರ ಕಾರ್ಯಕರ್ತರನ್ನು ಮನೆ ಹತ್ತಿರವೂ ಬಿಟ್ಟುಕೊಳ್ಳದೇ ವಾಪಸ್ ಕಳಹಿಸಿದ್ದೀರಿ. ೧೭ ಜನ ಶಾಸಕರು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು ನಿಜ. ಆದರೆ ಅದರಲ್ಲಿ ನೀವು ಕೊನೆಯವರಾಗಿದ್ದೀರಿ. ವಿಧಾನಸೌಧದಲ್ಲಿ ನಿಮ್ಮ ಮೇಲೆ ದಾಳಿ ಆದಾಗ ನಾನೇ ರಕ್ಷಿಸಿದ್ದು ಎಂದು ಅವರು ಹೇಳಿದರು.

Related Posts

Leave a Reply

Your email address will not be published. Required fields are marked *