ಮೈಸೂರು: ಸಿದ್ದರಾಮಯ್ಯ ಹೆಸರಿಡಿ ಅಂದ ತಕ್ಷಣ ನಾನು ಸಿದ್ದರಾಮಯ್ಯ ಪರ ಅಥವಾ ಕಾಂಗ್ರೆಸ್ ಪರ ಅಂತಲ್ಲ. ಕಾಂಗ್ರೆಸ್ ಕೂಡ ಸೇರಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕೆ.ಆರ್.ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಾನು ಕಾರ್ಪೊರೇಷನ್ ನಲ್ಲಿ ಕೇಳಿದಾಗ ಆ ರಸ್ತೆಗೆ ಹೆಸರಿಲ್ಲ ಅಂದರು. ಹಾಗಾಗಿ ಸಿದ್ದರಾಮಯ್ಯ ಹೆಸರಿಡಲಿ ಬಿಡಿ ಎಂದು ಹೇಳಿದ್ದೆ. ಸಿದ್ದರಾಮಯ್ಯ ಕೊಡುಗೆ ಸಾಕಷ್ಟು ಇದೇ ಅದನ್ನು ಯಾರೂ ಪ್ರಿನ್ಸೆಸ್ ರಸ್ತೆ ಅಂತ ಕರಿಯಲ್ಲ. ಹಾಗಾಗಿ ಸಿದ್ದರಾಮಯ್ಯ ಹೆಸರಿಡಿ ಎಂದೆ ಅಂದರು.
ಪ್ರಿನ್ಸೆಸ್ ರಸ್ತೆ ಅಂತ ಇರೋದು ದಾಖಲೆ ಇದ್ರೆ ಬದಲಾವಣೆ ಬೇಡ. ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಡಲಿ. ನಾನು ಕಾಂಗ್ರೆಸ್ ಶಾಸಕ ಹರೀಶ್ ಗೌಡಗೆ ಮನವಿ ಮಾಡುತ್ತೇನೆ. ಒಂದೊಮ್ಮೆ ಪ್ರಿನ್ಸೆಸ್ ರಸ್ತೆ ಅಂತ ಕರೆಯೋದಕ್ಕೆ ದಾಖಲೆ ಇದ್ದರೆ ಬದಲಾವಣೆ ಬೇಡ, ಹೊಸ ಬಡಾವಣೆ ಮಾಡಿ ಸಿದ್ದರಾಮಯ್ಯ ಹೆಸರಿಡಲಿ, ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಹೇಳಿದರು.
ಕಳೆದ 11 ವರ್ಷದಿಂದ ಸಿದ್ದರಾಮಯ್ಯ ವಿರೋದಿಸುತ್ತಿರುವವನು ಪ್ರತಾಪ್ ಸಿಂಹ ಒಬ್ಬನೇ, ಅವರ ಸಿದ್ದಾಂತ ವಿರೋಧಿ ನಾನು, ಇದೇ ಸಿದ್ದರಾಮಯ್ಯ ಮೈಸೂರು ಏರ್ಪೋರ್ಟ್ ಗೆ ಟಿಪ್ಪು ಹೆಸರನ್ನು ಇಡಲು ಹೊರಟಿದ್ದರು. ಅದನ್ನು ಬೊಮ್ಮಾಯಿ ಅವರಿಗೆ ಹೇಳಿ ತಡೆದೆ, ಇದಕ್ಕೆ ಮೈಸೂರು ಮಹಾರಾಣಿ ಅವರು ಕೂಡ ನನ್ನ ಹೊಗಳಿದ್ದರು. ಮೈಸೂರು ಬೆಂಗಳೂರು ನಡುವೆ ಟಿಪ್ಪು ಎಕ್ಸ್ಪ್ರೆಸ್ ಅಂತ ಇತ್ತು, ಅದನ್ನು ಕೂಡ ಒಡೆಯರ್ ಎಕ್ಸ್ಪ್ರೆಸ್ ಅಂತ ಬದಲಿಯಿಸಿದೆ. ಅಂದು ಕೂಡ ಪ್ರಮೋದಾದೇವಿ ನನ್ನ ಕಾರ್ಯಕ್ಕೆ ಶ್ಲಾಘಸಿದರು ಎಂದರು.
ಚಾಮುಂಡಿ ತಾಯಿಗೆ ಅವಮಾನಿಸಿ ಮಹಿಷ ದಸರಾ ಮಾಡಲು ಮುಂದಾಗಿದ್ದರು. ಅಂದು ಕೂಡ ಅದನ್ನು ವಿರೋಧ ಮಾಡಿದ್ದು ಮಹಿಷ ದಸರಾ ಮಟ್ಟ ಹಾಕಿದ್ದು ನಾನು, ಅರಮನೆ ಕೂಡ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಪ್ರತಾಪ್ ಸಿಂಹ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗುವ ಅನಿವಾರ್ಯತೆ ಇಲ್ಲ. ನನ್ನ ತಂದೆ ಕೂಡ ಜನಸಂಘದಿಂದ ಬಂದಿರೋರು. ನಾನು ಕಾಂಗ್ರೆಸ್ ಗೆ ಹೋಗಬೇಕು ಅಂತಿದ್ದರೆ, ಚುನಾವಣೆ ಸಮಯದಲ್ಲೇ ಹೋಗ್ತಿದ್ದೇ. ಟಿಕೆಟ್ ಕೊಡ್ತೀವಿ ಬನ್ನಿ ಅಂತ ಸಾಕಷ್ಟು ಜನ ಕರೆದಿದ್ದರು, ಅಂತಹ ಸಮಯದಲ್ಲೇ ಹೋಗಲಿಲ್ಲ ಎಂದು ಹೇಳಿದರು.
ವಿ.ಸೋಮಣ್ಣ ವರುಣದಲ್ಲಿ ಚುನಾವಣೆ ನಿಂತಾಗ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು, ನನ್ನ ಮೇಲೆ ಎರಡು ಕೇಸ್ ಹಾಕಿಸಿದ್ದರು. ಈಗಲೂ ಸಹ ಕೇಸ್ ನಡೆಯುತ್ತಿದೆ. ನಾನು ಬದ್ಧತೆಯಿರುವ ವ್ಯಕ್ತಿ, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಕೆಲವರು ಬಕೆಟ್ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾತು ಸಭ್ಯತೆ ಮೀರಬಾರದು ಕಿಡಿಕಾರಿದರು.