ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2019- ರಿಂದ 2023 ರವರೆಗೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟ್‌ಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಸೈಟ್ ಹಂಚಿಕೆ ಹಗರಣ ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳವರ ಜೊತೆ ಮಾತನಾಡಿದ ಅವರು, ೨೦೧೯ ರಿಂದ ೨೦೨೩ ರವರೆಗೆ ಹಂಚಿಕೆಯಾಗಿರುವ 50:50 ಅನುಪಾತದ ಸೈಟ್‌ಗಳನ್ನು ರದ್ದು ಮಾಡಲಾಗಿದೆ. 50:50 ಸೈಟ್‌ಗಳು ಮತ್ತು ಸೈಟ್‌ಗಳಲ್ಲಿ ಮನೆ ಕಟ್ಟಿದವರ ಲಿಸ್ಟ್ ತರಿಸುತ್ತಿದ್ದೇನೆ. ಸದ್ಯಕ್ಕೆ ಎಲ್ಲವನ್ನೂ ರದ್ದು ಮಾಡಲಾಗಿದೆ. ಕಾನೂನು ಹೋರಾಟ ಇರುವ ಸೈಟ್‌ಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಆದೇಶ ಜಾರಿ ಮಾಡುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ, 2018 ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ ನಡೆದಿದೆ. ಅಲ್ಲಿ ಅಕ್ರಮಗಳಾಗಿದ್ದರೆ ಅವನ್ನೂ ರದ್ದು ಮಾಡುತ್ತೇವೆ. ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರು ಕೂಡ ನಿವೇಶನ ಪಡೆದಿದ್ದಾರೆ. ಸಾಕಷ್ಟು ಅಕ್ರಮ ನಡೆದಿದೆ ಹೀಗಾಗಿ ಎಲ್ಲವನ್ನೂ ರದ್ದು ಮಾಡಿದ್ದೇವೆ ಎಂದು ವಿವರಿಸಿದ್ದಾರೆ.
ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ನಾಗೇಂದ್ರ ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು. ಬಿಜೆಪಿಯವರು ಗದ್ದಲ ಮಾಡಿ ಅಧಿವೇಶನ ಕೆಡಿಸಿದರು. ನಾಗೇಂದ್ರ ಅವರ ವಿಚಾರದಲ್ಲಿ ಸಿಎಂ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ಪ್ರತಿಭಟನೆ ಮಾಡುವುದು ಬಿಟ್ಟು ಸದನದಲ್ಲಿ ಚರ್ಚೆ ಮಾಡಬಹುದಿತ್ತು ಎಂದು ಎಂದಿದ್ದಾರೆ.


