ದೇಶ-ವಿದೇಶ
ರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆ: ಜೀವವುಳಿಸಿದ ಡೆಲಿವರಿ ಬಾಯ್
ತಮಿಳುನಾಡಿನಲ್ಲಿ ರಾತ್ರಿ ಮಹಿಳೆಯೊಬ್ಬರು ಇಲಿ ಪಾಷಾಣ ಆರ್ಡರ್ ಮಾಡಿದ್ದು, ಡೆಲಿವರಿ ಬಾಯ್‌ಗೆ ಮಹಿಳೆ ಸಂಕಷ್ಟದಲ್ಲಿದ್ದಾಳೆಂದು ಅರಿವಾಗಿ ಸಮಯ ಪ್ರಜ್ಞೆಯಿಂದ ಆಕೆಯ ಜೀವವುಳಿಸಿದ್ದಾನೆ. ಬಳಿಕ ಆತ ವೀಡಿಯೊ ಮಡಿ ಈ ವಿಷಯ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿಆತನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಡೆಲಿವರಿ ಬಾಯ್ ವೀಡಿಯೋದಲ್ಲಿ ಹೇಳಿರುವ ವಿಚಾರ ಇಷ್ಟು, ಮಹಿಳೆಯೊಬ್ಬರು ತಡ ರಾತ್ರಿ ಮೂರು ಪ್ಯಾಕೆಟ್ ಇಲಿ ವಿಷ ಆರ್ಡರ್ ಮಾಡಿದ್ದಾರೆ. ಆರ್ಡರ್‌ನಂತೆ ಇಲಿ ವಿಷ ಪ್ಯಾಕೆಟ್‌ಗಳನ್ನು ಹಿಡಿದು
ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ ವಾಪಸ್ ಪಡೆಯಿರಿ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ
ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುವೆ. ಮಸೂದೆ ವಾಪಸ್ ಪಡೆಯಿರಿ ಎಂದು ಮುಖ್ಯಮಂತ್ರಿ
ಇಡಿ ಮೇಲೆ ಮಮತಾ ರೇಡ್: ದಾಳಿ ವೇಳೆ ನುಗ್ಗಿ “ಐಪ್ಯಾಕ್” ಕಡತಗಳನ್ನು ಹೊತ್ತೊಯ್ದ ದೀದಿ
ಚುನಾವಣಾ ತಂತ್ರಗಾರಿಕೆ ಸಂಸ್ಥೆ ‘ಐ ಪ್ಯಾಕ್’ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತಾದಲ್ಲಿರುವ ಐಪ್ಯಾಕ್ ಮುಖ್ಯಸ್ಥನ ಮನೆಯ ಮೇಲೆ ದಾಳಿ ನಡೆದಾಗ ಅಲ್ಲಿಗೆ ನುಗ್ಗಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಾಖಲೆಗಳನ್ನು ಎತ್ತಿಕೊಂಡು
ಏಪ್ರಿಲ್ ನಿಂದ ದೇಶದ ಜನಗಣತಿ ಪ್ರಾರಂಭ
ನವದೆಹಲಿ:ಕಳೆದ 2011ರ ಬಳಿಕ ಇದೇ ಮೊದಲ ಬಾರಿಗೆ ದೇಶದ ಜನಗಣತಿಯು ಬರುವ ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ. 2027ರ ಮೊದಲ ಹಂತದ ಜನಗಣತಿ ಕಾರ್ಯ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ನಡೆಸಲಾಗುತ್ತದೆ. ಈ ಬಾರಿ ಎರಡು ಹಂತದಲ್ಲಿ ಗಣತಿ ನಡೆಯಲಿದ್ದು 2026ರ ಏಪ್ರಿಲ್
ಭಾರತದ ಮೇಲೆ ಶೇ.500ರಷ್ಟು ಸುಂಕ ಹೇರಿಕೆ ಮಸೂದೆಗೆ ಟ್ರಂಪ್ ಸಹಮತ
ನ್ಯೂಯಾರ್ಕ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಹಲವಾರು ಬಾರಿ ಎಚ್ಚರಿಕೆ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಏಷ್ಯಾದ ರಾಷ್ಟ್ರಗಳಾದ ಭಾರತ, ಚೀನಾ ಮತ್ತು
ಅಧಿಕಾರಕ್ಕಾಗಿ ಒಂದಾಗಿದ್ದ ಬಿಜೆಪಿ-ಕಾಂಗ್ರೆಸ್ ಮೈತ್ರಿ ಮುರಿದುಬಿತ್ತು!
ರಾಜಕೀಯ ವೈರಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಹಿಡಿಲು ಮೈತ್ರಿ ಮಾಡಿಕೊಂಡಿದ್ದು, ಮಿತ್ರಪಕ್ಷಗಳ ವಿರೋಧದ ಬೆನ್ನಲ್ಲೇ ಮೈತ್ರಿಯಿಂದ ಹಿಂದೆ ಸರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆ ಜಿಲ್ಲೆಯ ಅಂಬೆರ್ನಾಥ್ ಮುನ್ಸಿಪಾಲ್ ಕೌನ್ಸಿಲ್ ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು
ಭಾನುವಾರ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್!
ಫೆಬ್ರವರಿ 1 ಭಾನುವಾರದಂದು 2026-27ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ. ಫೆಬ್ರವರಿ ೧ರಂದು ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಜನವರಿ 29ರಂದು ಆರ್ಥಿಕ ಸಮೀಕ್ಷೆ ವರದಿ
ದೇಶದಲ್ಲಿ ಪಾಡೆಲ್ ವಿಸ್ತರಣೆಗೆ ಮಹತ್ವದ ಹೆಜ್ಜೆಯಿಟ್ಟ ಎಂಎಸ್ ಧೋನಿ
ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ‘7ಪ್ಯಾಡೆಲ್ ಎಂಎಸ್ ಧೋನಿ’ ಅನ್ನು ದೇಶದ ಪ್ರಮುಖ ಪಾಡೆಲ್ ಇಕೋಸಿಸ್ಟಮ್ ಆಗಿರುವ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ. ಆಗಸ್ಟ್ 2024ರಿಂದ JSW ಸ್ಪೋರ್ಟ್ಸ್‌ನ ಸ್ಥಾಪಕ
ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನಿಧನ
ಪಶ್ಚಿಮ ಘಟ್ಟಗಳ ಸಂರಕ್ಷಣೆ ವರದಿ ರಚಿಸಿದ್ದ ಹಿರಿಯ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ (83) ಪುಣೆಯಲ್ಲಿ ಬುಧವಾರ ನಿಧನರಾದರು. ಮಾಧವ ಗಾಡ್ಗೀಳ್ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿ ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ
ರಷ್ಯಾದ ತೈಲ ಹಡಗು ವಶಕ್ಕೆ ಪಡೆದ ಅಮೆರಿಕ!
ಅಟ್ಲಾಂಟಿಕ್ ಮಹಾಸಾಗರದಲ್ಲಿ ರಷ್ಯಾದ ಧ್ವಜ ಹೊಂದಿದ್ದ ತೈಲ ಹಡಗನ್ನು ಅಮೆರಿಕದ ಸೇನೆ ಸಿನಿಮಯ ಶೈಲಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದೆ. ಉತ್ತರ ಸಮುದ್ರದಲ್ಲಿ ಕಳೆದೆರಡು ವಾರಗಳಿಂದ ಅನುಮಾನಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಹಡಗಿನ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿದ್ದ ಅಮೆರಿಕ ಗುರುವಾರ ಹಡಗನ್ನು ವಶಕ್ಕೆ




