ದೇಶ-ವಿದೇಶ
ಇಸ್ರೇಲ್‌ನ 15 ಕ್ಕೂ ಹೆಚ್ಚು ಕಡೆ ಇರಾನ್ ದಾಳಿ
ಉತ್ತರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಹೈಫಾ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ. ಅಮೆರಿಕ-ಇಸ್ರೇಲ್ ನಡೆಸಿದ ದಾಳಿಗಳಲ್ಲಿ ತನ್ನ 34 ಪ್ರಜೆಗಳನ್ನು ಕಳೆದುಕೊಂಡಿದ್ದಕ್ಕೆ ಇರಾನ್ ಈ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಹೈಫಾದಲ್ಲಿ ಬಹುಮಹಡಿ ಕಟ್ಟಡಗಳಿಗೆ ಹಾನಿಯಾಗಿದೆ. ಕದನ ವಿರಾಮ ಸಂಬಂಧ ಕತಾರ್, ಟರ್ಕಿ ಮಧ್ಯಸ್ಥಿಕೆ ತಿರಸ್ಕರಿಸಿದ ಇರಾನ್, ಅಮೆರಿಕ ಜೊತೆ ಮಾತುಕತೆ ಅಗತ್ಯವಿಲ್ಲ. ಯಾರ ಮಧ್ಯಸ್ಥಿಕೆಯೂ ಇನ್ನು ಮುಂದೆ ಅಗತ್ಯವಿಲ್ಲ ಎಂದು
ಹರ್ಮುಜ್ ತೆರೆಯುವಂತೆ ಟ್ರಂಪ್ ಬೆದರಿಕೆ: ನಷ್ಟ ತುಂಬಿ ಕೊಡಿ ಎಂದ ಇರಾನ್
ಇಸ್ರೇಲ್- ಅಮೆರಿಕ ಮಾಡಿರುವ ದಾಳಿಗಳಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ಹರ್ಮುಜ್ ಜಲಸಂಧಿ ತೆರೆಯುವ ಮಾತೇ ಇಲ್ಲ ಎಂದು ಇರಾನ್ ಹೊಸ ಷರತ್ತುಗಳನ್ನು ಅಮೆರಿಕದ ಮುಂದಿಟ್ಟಿದೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ
ಇರಾನ್-ಇಸ್ರೇಲ್ ಸಂಘರ್ಷ: ಔಷಧಿಗಳ ಬೆಲೆ ಏರಿಕೆ ಆತಂಕ
ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಉದ್ವಿಗ್ನಗೊಂಡಿದ್ದು, ನಾನಾ ದೇಶಗಳಿಗೆ ಇಂಧನ, ಎಲ್‌ಪಿಜಿ ಪೂರೈಕೆ ವ್ಯತ್ಯಗೊಂಡು ಹಲವು ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಈ ಯುದ್ಧವು ಭಾರತದ ವೈದ್ಯಕೀಯ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಔಷಧಿಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಪೂರೈಕೆಯಲ್ಲಿ
ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು
ಬೆಂಗಳೂರು ನಗರದ ನಾನಾ ಕಡೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯಾಚರಣೆ ತೀವ್ರಗೊಂಡಿದ್ದು, 272 ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಗಹಡಿಪಾರುಗೊಂಡವರಲ್ಲಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಸಿಸಿಬಿ ಪೊಲೀಸರು
ಶಿಲಾಯುಗಕ್ಕೆ ಇರಾನ್ ಎಂದ ಟ್ರಂಪ್: ಆಕ್ರಮಣಕಾರರ ಪಾಲಿಗೆ ಇರಾನ್ ಮಸಣವೆಂದ ಆರ್ಮಿ ಚೀಫ್
ಇರಾನ್ ಅನ್ನು ಮರಳಿ ನಾವು ‘ಶಿಲಾಯುಗ’ಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಹೇಳಿಕೆಗೆ ಇರಾನ್ ಸೇನಾ ಮುಖ್ಯಸ್ಥ ಅಲಿ ಜಹಾನ್‌ಶಾಹಿ ಅಮೆರಿಕಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಂಪ್ ನೀಡಿದ ಈ ಹೇಳಿಕೆ ಬಗ್ಗೆ ಚೀನಾ ಕೂಡ ವಿರೋಧ ವ್ಯಕ್ತಪಡಿಸಿದೆ. ಟ್ರಂಪ್
ಕುಡಿಯಲು ನೀರು ಕೇಳಿ ಬಂದು ಮಹಿಳೆಯ ಕಟ್ಟಿ ಹಾಕಿ ಅತ್ಯಾಚಾರ
ಕುಡಿಯಲು ನೀರು ಬೇಕೆಂದು ಕೇಳಿಕೊಂಡು ಮನೆಗೆ ಬಂದಾತ ಮಹಿಳೆ ನೀರು ತರಲು ಒಳಗೆ ಹೋದಾಗ ನುಗ್ಗಿ ಕೈ ಕಟ್ಟಿ ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯು ಮನೆಯಲ್ಲಿ ಒಬ್ಬರೇ
ನಾಸಿಕ್‌ನಲ್ಲಿ ರಾತ್ರಿ ಕಾರು ಬಾವಿಗೆ ಉರುಳಿ ಒಂದೇ ಕುಟಂಬದ 9 ಜನ ಸಾವು
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಕಾರೊಂದು ಬಾವಿಗೆ ಉರುಳಿ ಬಿದ್ದು, ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿದೆ.
ಇರಾನ್-ಇಸ್ರೇಲ್ ಸಂಘರ್ಷ: ಕುವೈತ್ ತೈಲ ಘಟಕಕ್ಕೆ ಇರಾನ್ ಡ್ರೋನ್ ದಾಳಿ
ಕುವೈತ್ ನ ಮಿನಾ ಅಲ್ – ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಡ್ರೋನ್‌ಗಳು ಶುಕ್ರವಾರ ಮತ್ತೆ ದಾಳಿ ನಡೆಸಿದ್ದು, ಹಲವು ಘಟಕಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿವೆ ಎಂದು ವರದಿಯಾಗಿದೆ. ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ ಈ ದಾಳಿಯನ್ನು ದೃಢಪಡಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು
ನನ್ನನ್ನು ಮೌನಗೊಳಿಸಲಾಗಿದೆ, ಆದರೆ ಸೋತಿಲ್ಲ: ಎಎಪಿ ರಾಜ್ಯಸಭೆ ಸದಸ್ಯ ಚಡ್ಡಾ
ರಾಜ್ಯಸಭೆಯಲ್ಲಿ ಉಪನಾಯಕನ ಸ್ಥಾನದಿಂದ ಎಎಪಿ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ‘ನನ್ನನ್ನು ಮೌನಗೊಳಿಸಲಾಗಿದೆ, ಆದರೆ ಸೋತಿಲ್ಲ’ ಇದು ಆಮ್ ಆದ್ಮಿಗೆ ನನ್ನ ಸಂದೇಶ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದು ಅಪರಾಧವೇ, ನಾನು ಮಾಡಿದ್ದು
ಯುದ್ಧ ವಿಚಾರದಲ್ಲಿ ಕ್ಷಣಕ್ಕೊಂದು ಮಾತು ಬೇಡ: ಟ್ರಂಪ್‌ಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ವಾರ್ನ್
ಮಧ್ಯಪ್ರಾಚ್ಯ ಸಂಘರ್ಷ ವಿಚಾರದಲ್ಲಿ ಕ್ಷಣಕ್ಕೊಂದು ಮಾತು ಆಡುವ ಮೂಲಕ ಗೊಂದಲ ಸೃಷ್ಟಿಸಬೇಡಿ. ನೀವು ಗಂಭೀರವಾಗಿರಿ, ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬೇಡಿ. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು ಪರಿಸ್ಥಿತಿ ತಿಳಿಗೊಳಿಸಿ




