Menu

ಕೇಂದ್ರ ಸರಕಾರ ಬರೀ ಮಾತಾಡುತ್ತಿದೆ, ಕೆಲಸ ಮಾಡ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

ಗ್ಯಾಸ್ , ಪೆಟ್ರೋಲ್ ಡಿಸೇಲ್ ಸೇರಿ ಪ್ರತಿಯೊಂದರ ಬೆಲೆ ಒಂದರ ಬೆಲೆ ದಿನ ಬಿಟ್ಟು ದಿನ ಪ್ರಧಾನಿ ಮೋದಿ  ಏರಿಕೆ ಮಾಡುತ್ತಿದ್ದಾರೆ ಎಂದು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿಯ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಣಿಣಿಜ್ಯ ಸಿಲಿಂಡರ್‌ ಬೆಲೆ ಮತ್ತೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದವರಿಗೆ ಜನರ  ಬದುಕಿ   ಬಗ್ಗೆ ಕಾಳಜಿ ಇಲ್ಲ‌ , ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.ಬರೀ ಮಾತಿನಿಂದ‌ ಸಮಸ್ಯೆ ಬಗ್ಗೆ ಪರಿಹಾರ ಹೇಳುತ್ತಾರೆ ಆದರೆ ನಿಜವಾದ ಪರಿಹಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ವಿರೋಧ ಪಕ್ಷದವರು ಸಹಕಾರ ಇಲ್ಲ ಅಂತ ಆರೋಪ ಮಾಡುತ್ತ್ತಿತ, ದೂರುತ್ದ್ದಾತ ಇರುತ್ರೆತಾರೆ, ವಿರೋಧಪಕ್ಷಗಳ ಸಹಕಾರ ಯಾವಾಗಲೂ ಇರುತ್ತದೆ.  ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿಲ್ಲ. ರೂಪಾಯಿ ಬೆಲೆ ದಿನದಿಂದ  ದಿನ‌ ಕಡಿಮೆಯಾಗುತ್ತಿದೆ,  ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಮನರೇಗಾ ಸೇರಿ ಹಲವು ಕಾರ್ಯಕ್ರಮಕ್ಕೆ ಇವರ ಬಳಿ ಹಣ ಇಲ್ಲ. ಈ ಕೇಂದ್ರ ಸರ್ಕಾರ ಮಾತಿನ ಮಲ್ಲನ ಸರ್ಕಾರವಾಗಿದೆ, ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಈ ಸರ್ಕಾರದ ಕಾರ್ಯವೈಖರಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಮಾತಿನಲ್ಲೇ ಕಾಲ ಕಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್‌ ಸಂಪುಟದ ಲಿಸ್ಟ್ ಅಂತಿಮ ಸಾಧ್ಯತೆ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಿಂದ ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಿದರು. ಎಐಸಿಸಿ ಅಧ್ಯಕ್ಷ ಖರ್ಗೆ,ರಾಹುಲ್ ಗಾಂಧಿ ಹಾಗೂ ಮಾಜಿ‌ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ಡಿಸಿಎಂ‌ ಹಾಗೂ ಸಚಿವರ‌ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Related Posts

Leave a Reply

Your email address will not be published. Required fields are marked *