Friday, September 25, 2026
Menu

ಕಿತ್ತೂರಿನಲ್ಲಿ ಆಸ್ತಿ ದಾಖಲೆಗಾಗಿ ಕಚೇರಿಗೆ ಬಂದಿದ್ದ ತಂದೆ- ಮಗಳ ಹತ್ಯೆ

ಆಸ್ತಿ ದಾಖಲೆ ಪಡೆದುಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದ ತಂದೆ ಮತ್ತು ಮಗಳನ್ನು ಹತ್ಯೆ ಮಾಡಿರುವ ಘಟನೆಯು ಬೆಳಗಾವಿಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಮಗಳು ಶಶಿಕಲಾ ಕುಂದರಗಿ (26) ಹತ್ಯೆಯಾದವರು. ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಸೋದರರ ಮಧ್ಯೆ ವ್ಯಾಜ್ಯ ಇತ್ತು ಎಂದು ಹೇಳಲಾಗಿದೆ.

ಐಎಎಫ್‌ನಲ್ಲಿ ಉದ್ಯೋಗ ಆಮಿಷ: ಯುವಕನ ಚಿನ್ನ ದೋಚಿದ ನಕಲಿ ಅಧಿಕಾರಿ

ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ವಂಚಕನೊಬ್ಬ ಉದ್ಯೋಗ ಕೊಡಿಸುವುದಾಗಿ ಯುವಕನನ್ನು ನಂಬಿಸಿ ಚಿನ್ನದ ಚೈನ್‌ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪಟ್ಟೇಗಾರ್ ಪಾಳ್ಯದ ನಿವಾ, 25 ವರ್ಷದ ಸುಜನ್ ಆರ್.ಕೆ. ವಂಚನೆಗೊಳಗಾದ ಯುವಕ. ಭಾರತೀಯ

ಜ್ಯೋತಿಷ್ಯ, ಪೂಜೆಯೆಂದು ನಂಬಿಸಿ ಬೆಂಗಳೂರಿನಲ್ಲಿ ಮಹಿಳೆಯ 40 ಲಕ್ಷ ರೂ. ಮೌಲ್ಯದ ಚಿನ್ನ ದೋಚಿದ ವಂಚಕ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜ್ಯೋತಿಷ್ಯ ಮತ್ತು ಚೌಡೇಶ್ವರಿ ದೇವಿಯ ಪೂಜೆ ಹೆಸರಿನಲ್ಲಿ ವಂಚಕನೊಬ್ಬ ಮಹಿಳೆಯಿಂದ ನಲ್ವತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದು, ಬಳಿಕ ತನಗೆ ಅಪಘಾತವಾಗಿರುವುದಾಗಿ ಎಐ ವೀಡಿಯೊ ಕಳಿಸಿ ನಂಬಿಸಿದರುವ ಘಟನೆ ಬಹಿರಂಗಗೊಂಡಿದೆ. ಬ್ಯಾಟರಾಯನಪುರದ ನಿವಾಸಿಯಾಗಿರುವ 62 ವರ್ಷದ

ಸೋಮವಾರಪೇಟೆಯಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

ವೃದ್ಧ ಪತ್ನಿಗೆ ಗುಂಡು ಹಾರಿಸಿ ಕೊಂದು, ನಂತರ ಪತಿಯೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಪೇಟೆಯ ಕುಂಬಾರಗಡಿಗೆ ಗ್ರಾಮದಲ್ಲಿ ಸಂಭವಿಸಿದೆ. ಕುಂಬಾರಗಡಿಗೆ ಗ್ರಾಮದ ಕೃಷಿಕರಾದ ಕೆ.ಟಿ.ಸುಬ್ಬಯ್ಯ(೭೭), ಬೋಜಮ್ಮ(೭೪) ಮೃತಪಟ್ಟವರು. ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದು, ಪತ್ನಿಗೆ ತಲೆಯ

ಪ್ರಿಯಕರ, ಸ್ನೇಹಿತನ ಜೊತೆ ಸಕಲೇಶಪುರ ಲಾಡ್ಜ್‌ನಲ್ಲಿದ್ದ ಯುವತಿ ಸಾವು

ಸಕಲೇಶಪುರದ ವಳಲಹಳ್ಳಿ ಕೂಡಿಗೆಯ ಲಾಡ್ಜ್‌ವೊಂದರಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಬೆಂಗಳೂರು ನಾಗಸಂದ್ರ ನಿವಾಸಿ ೨೫ ಹರೆಯದ ವರ್ಷಾ ಎಂದು ಗುರುತಿಸಲಾಗಿದೆ. ಆಕೆ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಟ್ರಿಪ್‌ಗೆಂದು ಬಂದಿದ್ದಳು. ಮೂವರೂ ಶನಿವಾರ,

ಯಾದಗಿರಿ ಗಣೇಶ ಮೆರವಣಿಗೆಯಲ್ಲಿ ಗಲಾಟೆ: 19 ಜನರ ವಿರುದ್ಧ ಎಫ್‌ಐಆರ್

ಯಾದಗಿರಿ ನಗರದ ದುರ್ಗಾದೇವಿ ಮಂದಿರ ಬಳಿ ಗಣೇಶ   ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು 19 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಣೇಶ ಉತ್ಸವದ ಮೆರವಣಿಗೆ ವೇಳೆ ಒಂದು ಗುಂಪಿನ ಯುವಕನ ಮೇಲೆ ಬೈಕ್‌ ಹಾದು ಹೋಗಿದೆ, ಆಗ

ಅಡ್ಡಾದಿಡ್ಡಿ ಆಟೊ ಚಾಲನೆ: ಶಿವಮೊಗ್ಗದಲ್ಲಿ ಚಾಲಕನ ಬಂಧನ

ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿಯಾಗಿ ಆಟೊ ಚಲಾಯಿಸುತ್ತಿದ್ದ ಚಾಲಕನನನ್ನು ಬಂಧಿಸಿರುವ ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ NH-69 ಆಯನೂರು ಗೇಟ್ ಸರ್ಕಲ್ ಸಮೀಪ ಆಟೊವನ್ನು ಚಾಲಕ

ದ್ವಿಚಕ್ರ ವಾಹನಕ್ಕೆ ಹಾಲು ಟ್ಯಾಂಕರ್‌ ಡಿಕ್ಕಿ: ಇಬ್ಬರ ಸಾವು

ದ್ವಿಚಕ್ರ ವಾಹನಕ್ಕೆ ಹಾಲಿನ ಟ್ಯಾಂಕರ್‌ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಟ್ಟಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದಿದೆ. ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್ ಮತ್ತು ಕೀರ್ತನಾ ಮೃತಪಟ್ಟವರು. ಗಣೇಶ ಹಬ್ಬ ಮುಗಿಸಿ ಮುಂಜಾನೆ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ,

ಪತ್ನಿಯ ಕೊಂದು ತಲೆ ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ ಪೊಲೀಸ್‌ ವಾಹನದಿಂದ ಜಿಗಿದು ಸಾವು

ಗುವಾಹಟಿಯ ಹತಿಗಾಂವ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಂದು ತಲೆ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ ಪೊಲೀಸ್‌ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ. ರಾಮಾನುಜ್ ಗೋಸ್ವಾಮಿ (30) ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಾತ, ಗುವಾಹಟಿಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ

ಅಕ್ರಮ ಸಂಬಂಧ ಬಯಲು: ಚಿಕ್ಕಮ್ಮ-ಮಗ ಆತ್ಮಹತ್ಯೆ

ಚಿಕ್ಕಮ್ಮ ಮತ್ತು ಮಗ ಹೊಂದಿದ್ದ ಅಕ್ರಮ ಸಂಬಂಧ ಬಯಲಾಗುತ್ತಲೇ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಮಹಿಳೆ ಮತ್ತು ಆಕೆಯ ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವರಿಬ್ಬರು ಪರಸ್ಪರ