Saturday, September 19, 2026
Menu

ಮೂರು ಮಕ್ಕಳ ತಾಯಿಯ ಹತ್ಯೆಗೈದ ಪ್ರಿಯಕರ

ದಾವಣಗೆರೆಯ ಶೇಖರಪ್ಪ ನಗರದಲ್ಲಿ ವ್ಯಕ್ತಿಯೊಬ್ಬ ಮೂರು ಮಕ್ಕಳ ತಾಯಿ ಆಗಿರುವ ಪ್ರಿಯತಮೆಯನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ನಾಗರತ್ನ (45) ಕೊಲೆಯಾದ ಮಹಿಳೆ. ನಾಗರಾಜ್ (36) ಕೊಲೆ ಮಾಡಿದಾತ. ಆರೋಪಿಯು ಮಹಿಳೆಯೊಂದಿಗೆ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆಕೆಯನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

ಮಹಿಳೆಯ ಕಿರುಚಾಟ ಕೇಳಿ ಬಂದ ಜನ ಆತನನ್ನು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾಗರತ್ನ ಪತಿಯನ್ನು ತ್ಯಜಿಸಿ ಮೂರು ಮಕ್ಕಳನ್ನು ಬೇರೆ ಕಡೆ ಮನೆ ಮಾಡಿ ಇರಿಸಿ ತಾನು ಒಂಟಿಯಾಗಿ ಜೀವನ ಮಾಡುತ್ತಿದ್ದಳು. ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರತ್ನಳಿಗೆ ನಾಗರಾಜ್ ಪರಿಚಯವಾಗಿದ್ದ.

ಕೆಲವು ದಿನಗಳಿಂದ ಇಬ್ಬರ ನಡುವೆ ಪದೇ ಪದೆ ಜಗಳವಾಗುತ್ತಿತ್ತು. ಸುತ್ತಲಿನ ಜನರು ಈಕೆಯನ್ನು ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಅದರೂ ಕೂಡ ಅಲ್ಲೇ ವಾಸ ಮಾಡುತ್ತಿದ್ದಳು. ಬೆಳಗ್ಗೆ 10:30ಕ್ಕೆ ನಾಗರಾಜ್, ನಾಗರತ್ನಳನ್ನು ಅವಳ ಮನೆಯ ಮೇಲೆ ಕರೆದೊಯ್ದು ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆರ್‌ಎಂಸಿ ಯಾರ್ಡ್‌ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *