ಐವತ್ತು ದಿನದ ಹಿಂದೆ ಜನಿಸಿದ್ದ ಗಂಡು ಮಗುವನ್ನು ತಾಯಿ, ಅಜ್ಜ, ಅಜ್ಜಿ , ಸೋದರಮಾವ ಸೇರಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಘಟನೆ ಬೀದರ್‌ನ ಔರಾದ್‌ನಲ್ಲಿರುವ ವಡಗಾಂವ್ ಗ್ರಾಮದಲ್ಲಿ ನಡೆದಿದೆ.
ತನ್ನ ಪತ್ನಿ ವಾಣಿಶ್ರೀ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದು, ಅಲ್ಲಿ ಐವತ್ತು ದಿನ ತುಂಬಿದ ಮಗುವನ್ನು ಮಾವ ಬಸವರಾಜ್, ಅತ್ತೆ ರತ್ನಮ್ಮ, ಅವರ ಮಗ ಸಂತೋಷ್ ಸೇರಿ ಕೊಲೆ ಮಾಡಿದ್ದಾರೆ ಎಂದು ಪತಿ ಸಂಜು ಆರೋಪ ಮಾಡಿದ್ದಾರೆ.
ಎರಡು ವರ್ಷದ ಹಿಂದೆ ಮಹಾರಾಷ್ಟ್ರ ದೇಗೂಲೂರ ತಾಲೂಕಿನ ಕವಳಗಡ್ಡ ಗ್ರಾಮದ ಸಂಜು ಜೊತೆ ವಾಣಿಶ್ರೀ ಮದುವೆಯಾಗಿದ್ದರು. ತೆಲಂಗಾಣದ ನಿಜಮಾಬಾದ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಬಂದಿದ್ದರು. ರಾತ್ರಿ ವೇಳೆ ಪತ್ನಿ ಶೌಚಕ್ಕೆ ಹೋಗಿ ಬರುವಷ್ಟರಲ್ಲಿ ಮಗುವನ್ನು ದೇವರು ತೆಗೆದುಕೊಂಡು ಹೋಗಿದ್ದಾನೆ ಎಂದು ಪತ್ನಿ ಸೇರಿ ನಾಲ್ಲಕೂ ಆರೋಪಿಗಹಳು ಕತೆ ಕಟ್ಟಿರುವುದಾಗಿ ದೂರಿನಲ್ಲಿ ಸಂಜು ತಿಳಿಸಿದ್ದಾರೆ.
ಆರೋಪಿಗಳ ಮಾತಿನಿಂದ ಅನುಮಾನಗೊಂಡ ಸಂಜು ಸಂತಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ಆರೈಕೆ ಮಾಡಲಾಗದೆ 50 ದಿನದ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿಸದ್ದಾರೆ.
ಪೊಲೀಸ್ ತನಿಕೆ ವೇಳೆ ನಾಲ್ವರೂ ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ಗಂಡನ ಕೊಲೆಗೈದಾಕೆ, ಪ್ರಿಯಕರ ಅರೆಸ್ಟ್
ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಗಂಡನ ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಆರು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ರಾಘು ಗಾವಡೆ (40)ಯನ್ನು ಪತ್ನಿ ಮತ್ತು ಪ್ರಿಯಕರ ಕೊಲೆ ಮಾಡಿದ್ದರು. ರಾಘು ಗಾವಡೆ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ. ಸಂಚು ರೂಪಿಸಿ ಬಂಗಾರಿ ಗಾವಡೆ ಹಾಗೂ ರಾಮಾ ರಾಣ ಸೇರಿ ಕೊಲೆ ಮಾಡಿದ್ದರು. ಹೊಲದಲ್ಲಿ ಶವ ಹೂತು ಹಾಕಿದ್ದರು.
ಆರೋಪಿಯು ರಾಘು ಗಾವಡೆಯ ಸಹೋದರ ಸಂಬಂಧಿ, ಆತನ ಜೊತೆ ಬಂಗಾರಿ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನ ಹತ್ಯೆ ಬಳಿಕ ಕುರಿ ಕಾಯಲು ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ಮನೆಯಲ್ಲಿ ನಂಬಿಸಿದ್ದರು. ರಾಘುವಿನ ಅಣ್ಣ ಲಘಮಣ್ಣ ಹಾಗೂ ಹಿರಿಯರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


