ಹಾವೇರಿ ಜಿಲ್ಲೆಯಲ್ಲಿ ಡಗ್ಸ್ ಪೆಡ್ಲರಗಳು, ಒಸಿ ಆಡಿಸುವವರು, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟನ್ಶಿಪ್ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಡಿ ಪಾರಾದವರು, ಗೂಂಡಾ ಲಿಸ್ಟ್ನಲ್ಲಿದ್ದವರು ಪೊಲಿಸ್ ಸ್ಟೇಷನ್ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಈ ಸರ್ಕಾರ ಕಿತ್ತೊಗೆದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಬೇಕು ಎಂದು ಹೇಳಿದರು.
, ಜಿಲ್ಲೆ ಸಾಮರಸ್ಯದ ಶಾಂತಿಯ ಬೀಡು, ಸರ್ವಜ್ಞ ಕನಕದಾಸರು, ಶಿಶುನಾಳ ಶರೀಪರ ನಾಡು. ಈ ಜಿಲ್ಲೆಗೆ ಕಾಂಗ್ರೆಸ್ ಶಾಪವಾಗಿ ಬಂದಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್ನಲ್ಲಿದ್ದವರು ಪೊಲಿಸ್ ಸ್ಟೇಷನ್ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಬಹಿರಂಗವಾಗಿ ಇಸ್ರೇಟ್ ಅಡ್ಡಗಳು ನಡೆಯುತ್ತಿವೆ. ಬೀಡಿ ಅಂಗಡಿಯಲ್ಲಿ ಒಸಿ, ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮುಕ್ತವಾಗಿ ಸಿಗುವಂತ ದುಸ್ತಿತಿ ಜಿಲ್ಲೆಯಲ್ಲಿದೆ ಎಂದು ಆರೋಪಿಸಿದರು.
ಎಲ್ಲ ಕಾಲೇಜುಗಳಲ್ಲಿ ಎಲ್ಲಿ ಹೋದಲ್ಲಿ ಡಗ್ಸ್ ಇದೆ. ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದಾಗ ಎರಡು ದಿನದಲ್ಲಿ ಸರಿ ಮಾಡುವುದಾಗಿ ಹೇಳಿದ್ದರು. ಯಾವುದೇ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿಲ್ಲ. ನಿರಂತರವಾಗಿ ಇಸ್ಪೀಟ್ ಆಡುವವರು, ಡಗ್ಸ್ ಮಾರುವವರು, ಒಸಿ, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟನ್ಶಿಪ್ ನಡೆಯುತ್ತಿದೆ. ಮುಖ್ಯಮಂತ್ರಿಗಳೇ ಏಜೆಂಟ್ ಗಳಿಗೆ ಯುನಿಫಾರ್ಮ್ ಕೊಟ್ಟು ಬಿಡಿ. ಪೊಲೀಸ್ ಅಧಿಕಾರಿಗಳನ್ನು ಮನೆಯಲ್ಲಿಯೇ ಕೂಡಿಸಿ ಏಜೆಂಟ್ಗಳಿಗೆ ಅಧಿಕಾರ ಕೊಡಿ. ಇದೇ ರೀತಿ ಮುಂದುವರಿದರೆ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು
ಸವಣೂರು ತಾಲೂಕಿನಲ್ಲಿ ಒಬ್ಬ ಶಿಕ್ಷಕರನ್ನು ಬೆತ್ತಲೆ ಮಾಡಿ ಪೊಲಿಸ್ ಸ್ಟೇಶನ್ ವರೆಗೂ ಹೊಡೆದುಕೊಂಡು ಹೋದರೂ ಯಾರನ್ನೂ ಬಂಧಿಸಲಿಲ್ಲ. ಶಿಗ್ಗಾವಿಯಲ್ಲಿ ಹಗಲು ಹೊತ್ತಿನಲ್ಲೇ ಕೊಲೆ ಮಾಡಿದರೂ ರಾಜಿ ಮಾಡುವ ಕೆಲಸ ಮಾಡಿದ್ದಾರೆ. ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಆರೋಪಿಗಳು ಬೇಲ್ ಮೇಲೆ ಹೊರಗೆ ಬಂದರೆ ಅವರ ಮೆರವಣಿಗೆ ಮಾಡಿದರು ಎಂದರು.
ಹಾನಗಲ್ ತಾಲೂಕಿನ ನರೆಗಲ್ ನಲ್ಲಿ ಕೈ ಕತ್ತರಿಸಿದ್ದಾರೆ. ರಟ್ಟಿ ಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಶಿವಾಜಿ ಎನ್ನುವವರನ್ನು ಕೊಲೆ ಮಡಿದ್ದಾರೆ. ರಾಣೆಬೆನ್ನೂರಿನಲ್ಲಿ ಕಸಾಯಿ ಖಾನೆ ಬಂದ್ ಮಾಡುವಂತೆ ಹೋರಾಟ ಮಾಡಿದ ಬಜರಂಗ ದಳ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಇವೆಲ್ಲ ದೌರ್ಜನ್ಯ ಮಾಡಿರುವವರು ಡಿಕೆ ಶಿವಕುಮಾರ್ ಅವರ ಕುಕ್ಕರ್ ಬ್ರದರ್ಸ್. ಅವರಿಗೆ ಪೊಲಿಸರು ರಕ್ಷಣೆ ನೀಡುತಿದ್ದಾರೆ. ದೌರ್ಜನಕ್ಕೆ ಒಳಗಾದವರು ಎಲ್ಲರೂ ಹಿಂದುಳಿದ ವರ್ಗದವರು, ಶಿಗ್ಗಾವಿ, ಸವಣೂರು, ರಟ್ಟಿಹಳ್ಳಿ ಹಾನಗಲ್, ರಾಣೆಬೆನ್ನೂರಿನಲ್ಲಿ ಒಬಿಸಿ ಸಮುದಾಯದವರ ಮೇಲೆ ದೌರ್ಜನ್ಯ, ರೇಪ್, ಕೊಲೆ ಮಾಡಿದ್ದಾರೆ ಎಂದು ದೂರಿದರು.
ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಸಿದ್ದರಾಮಯ್ಯನವರೇ, ಎಲ್ಲಿದೆ ನಿಮ್ಮ ಅಹಿಂದ ಎಂದು ಪ್ರಶ್ನಿಸಿದರು. ಅಹಿಂದ ಕೊಲೆಯಾಗುತ್ತಿದೆ. ಕೈ ಕತ್ತರಿಸಿದ್ದಾರೆ. ನೀವೆಲ್ಲಿದ್ದೀರಿ, ಇವತ್ತಿನ ಸರ್ಕಾರ ಕುಕ್ಕ ಬ್ರದರ್ಸ್ಗಳ ರಕ್ಷಣೆ ಮಾಡುವ ವ್ಯವಸ್ಥೆಗೆ ಮುಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದೆ. ಎಲ್ಲ ವ್ಯವಸ್ಥೆಯನ್ನು ಏಜೆಂಟ್ಗಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಎಸ್ಪಿ, ಡಿವೈಎಸ್ಪಿ ಎಲ್ಲರೂ ದುಡ್ಡು ಕೊಟ್ಟು ಬಂದಿದ್ದಾರೆ. ಪೊಲೀಸರ ಹರಾಜು ನಡೆದಿದೆ. ಸಾಮಾನ್ಯ ಜನರಿಗೆ ನ್ಯಾಯ ಬೇಕು, ಎಸ್ಸಿ, ಎಸಿ, ಒಬಿಸಿ ಜನರಿಗೆ, ಹೆಣ್ಣು ಮಕ್ಕಳಿಗೆ ನ್ಯಾಯ ಬೇಕು ಎಂದು ಆಗ್ರಹಿದರು.
ರಾಜ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರದವರು ರೈತರಿಗೆ ನಯಾಪೈಸೆ ಕೊಡದೇ ಬರಗಾಲ ನಿರ್ವಹಣೆ ಮಾಡುತ್ತಿದ್ದಾರೆ. ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೈತರಿಗೆ ಪರಿಹಾರ ಕೊಡಲು ಆಗಲಿಲ್ಲ ಇವರಿಗೆ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಎರಡು ಪಟ್ಟು ಪರಿಹಾರ ನೀಡಿದರು. ನಾವು ಪ್ರವಾಹ ಬಂದಾಗ ಒಣ ಭೂಮಿಗೆ 6.5 ಸಾವಿರ ಬದಲು 13 ಸಾವಿರ ಕೊಟ್ಟೆವು. ನೀರಾವರಿಗೆ 18ಸಾವಿರ, ತೋಟಗಾರಿಕೆ ಬೆಳೆಗೆ 25 ಪರಿಹಾರ ಕೊಟ್ಟೆವು ಎಂದು ಹೇಳಿದರು.
ಸಿಎಂ ಡಿಕೆಶಿವಕುಮಾರ ಬಿಡದಿ ಯೋಜನೆ ಕುಮಾರಸ್ವಾಮಿ ಯೋಜನೆ ಅಂತ ಹೇಳಿದ್ದಾರೆ. ಅವರ ಕನಸನ್ನು ನನಸು ಮಾಡಲು ನಿಮ್ಮದೇನು ಹಿತಾಸಕ್ತಿ ಇದೆ. ಕುಮಾರಸ್ವಾಮಿ ಕನಸಿನಲ್ಲಿ ಡಿಕೆಶಿವಕುಮಾರ್ ಕನಸು ಕಾಣುತ್ತಿದ್ದಾರೆ ಎಂದರು. ಇದು ಹೋರಾಟದ ಆರಂಭ, ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲು ಎಲ್ಲರೂ ಸನ್ನದ್ದರಾಗಬೇಕು, ಈ ಸರ್ಕಾರ ಕಿತ್ತೊಗೆದು ಬಿಜೆಪಿ ಸರ್ಕಾರವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ರಚನೆ ಮಾಡಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯುವಕರಿಗೆ ಶಕ್ತಿ ತುಂಬಲು ಇವತ್ತು ಹೋರಾಟಕ್ಕೆ ಬಂದಿದ್ದಾರೆ. ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ. ವಿಜಯೇಂದ್ರ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸುವ ಕೆಲಸ ಮಾಡೋಣ. ಜಿಲ್ಲಾ, ತಾಲೂಕು ಹಾಗೂ ಗಾಮ ಪಂಚಾಯತಿ ಮಟ್ಟಕ್ಕೆ ಹೋರಾಟವನ್ನು ತೆಗೆದುಕೊಂಡು ಹೋಗುತ್ತೇವೆ. ಅಧಿಕಾರಿಗಳು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿದರೆ ನಿಮಗೆ ಸಂಕಷ್ಟ ಕಾದಿದೆ ಎಂದು ಎಚ್ಚರಿಕೆ ನೀಡಿದರು.


