Menu

ಕಡಿಮೆ ನೀರಿನ ಬೆಳೆ: ರೈತರಿಗೆ ಮಾಹಿತಿ ಕೊಡಿ

ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇದೇ ಇಂದಿನ ಗಂಭೀರ ವಿಚಾರ. ನಾಡಿಗೆ ಅವಶ್ಯಕವಾಗಿ ಬೇಕಿರುವುದು ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ! ಇಂಟರ್‌ನೆಟ್ ಮತ್ತು ವಾಟ್ಸಪ್ ಅನ್ನು ಜನೋಪಯೋಗಿ ಆಗಿ ಬಳಸುವ ಬಗ್ಗೆ  ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ.

ರಾಜ್ಯದಲ್ಲಿ ಕೆಲವು ಕಡೆ ಮುಂಗಾರು ವಿಫಲ. ಇದರ ಪರಿಣಾಮವಾಗಿ ಅನ್ನದಾತ ಕಂಗಾಲು . ಅವನಿಗೆ ಈಗ ಉಳಿದ ದಾರಿಯೊಂದೆ. ಮಡದಿ, ಮಕ್ಕಳು , ಮನೆಮಂದಿಯೊಂದಿಗೆ ಮುಂಬಯಿ, ಪುಣೆಗೋ, ಹೈದರಾಬಾದ್, ಬೆಂಗಳೂರಿಗೋ ಗುಳೇ ಹೋಗುವುದು. ಅಲ್ಲಿ ಮನೆಮಂದಿಯೆಲ್ಲ ಕೂಲಿಮಾಡಿ ಬದುಕುವುದು. ಈ ಪರಿಸ್ಥಿತಿಯಲ್ಲಿ ಎಸ್ ಐ ಆರ್ ಪ್ರಕ್ರಿಯೆ ಸೂಕ್ತವೇ ? ಮಿಗಿಲಾಗಿ ಈ ಸಂಕಷ್ಟ ಸಮಯದಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ನಯ, ನಾಜೂಕಾಗಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ದುರದೃಷ್ಟವಶಾತ್ ಇಂತಹ ವೇಳೆ ಅಧಿಕಾರ ವರ್ಗ ಬರ ನೀಗುವ ಸಕ್ರಿಯ ಕೆಲಸದಲ್ಲಿ ಭಾಗಿಯಾಗುವುದು ವಿರಳ. ಜಲಾಶಯಗಳಲ್ಲಿ ಮತ್ತು ಕೆರೆ, ಕುಂಟೆಗಳಲ್ಲಿ ಕಡಿಮೆ ನೀರಿದ್ದಾಗ ರೈತ ಅಧಿಕ ನೀರು ಬಳಕೆಯಾಗುವ ಬೆಳೆ ಹೇಗೆ ಬೆಳೆಯಲು ಸಾಧ್ಯ? ಇದು ನಾಡಿನ ರೈತನಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.

ಜಲಾಶಯಗಳಲ್ಲಿ ಕಡಿಮೆ ನೀರು ಇದ್ದಾಗ ಇದನ್ನು ನಾವು ದುಬಾರಿ ಮಾಡುವಂತಿಲ್ಲ. ಮಿಗಿಲಾಗಿ ಇದು ಮುಂದಿನ ಎರಡು ಮೂರು ತಿಂಗಳು ಕಾಲ ಜನ- ಜಾನುವಾರು ಕುಡಿಯುವ ನೀರಿಗಾಗಿ ಬಳಸಲು ಬೇಕಿರುವ ಜಲಸಂಪನ್ಮೂಲ. ತಮಿಳುನಾಡು ಮತ್ತು ಆಂಧ್ರದ ಜನತೆಗೆ ಹೋಲಿಸಿದರೆ ಜಲಾಶಯಗಳ ನೀರನ್ನು ಕನ್ನಡಿಗರು ಅನಗ್ಯತವಾಗಿ ಪೋಲು ಮಾಡಿದ ಉದಾಹರಣೆಗಳಿಲ್ಲ . ಇದೇನೆ ಇರಲಿ. ಇಂತಹ ಸಮಯದಲ್ಲಿ ಗ್ರಾಮೀಣ, ಕೃಷಿ, ಸಣ್ಣ ನೀರಾವರಿ, ಕಂದಾಯ ಮತ್ತು ಜಲಸಂಪನಮ್ಮೂಲ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬರ ಪೀಡಿತ ಪ್ರದೇಶಗಳಲ್ಲಿ ಸಂಚರಿಸಬೇಕು. ಆಯಾ ರೈತರಿಗೆ ಕಡಿಮೆ ನೀರು ಬಳಕೆಯಾಗುವ ಅಲ್ಪಕಾಲಿಕ ಬೆಳೆಗಳ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ನಿಖರ ಮತ್ತು ಸ್ಪಷ್ಟ ಮಾಹಿತಿ ನೀಡಬೇಕು.

ರೊಟೇಷನ್ ಬೆಳೆಗಳ ಬಗ್ಗೆ ಗ್ರಾಮೀಣರಿಗೆ ನಿಖರ ತಿಳಿವಳಿಕೆ ನೀಡಬೇಕಾದರೆ ಸಾಮೂಹಿಕ ಮಾಧ್ಯಮಗಳಾದ ದೂರದರ್ಶನ, ರೇಡಿಯೋ ಮೂಲಕ ರೈತನಿಗೆ ಸರಿಯಾದ ಮಾಹಿತಿ ರವಾನೆಯಾಗಬೇಕಲ್ಲವೆ ? ಇದಕ್ಕೆ ಯಾಕೆ ನಾವಿಂದು ಎಐ ಬಳಸುತ್ತಿಲ್ಲ ? ಕೆರೆ, ಕುಂಟೆಗಳಲ್ಲಿ ಮತ್ತು ಜೀವನದಿಗಳು ಬತ್ತಿರುವಾಗ ಅನ್ನದಾತನು ಯಾವ ಬಗೆಯ ಬೆಳೆ ಬೆಳೆಯಬೇಕು ? ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇವು ಇಂದಿನ ಗಂಭೀರ ವಿಚಾರ. ನಾಡಿಗೆ ಮತ್ತು ಜನತೆಗೆ ಅವಶ್ಯವಾಗಿ ಬೇಕಿರುವುದು ಎದುರಾದ ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ.

ಇಂಟರ್‌ನೆಟ್ ಮತ್ತು ವಾಟ್ಸಪ್ ಅನ್ನು ಜನೋಪಯೋಗಿ ಆಗಿ ಬಳಸುವ ಬಗ್ಗೆ ಇಂದು ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ. ಇಂದು ನಮಗೆ ತಂತ್ರಜ್ಞಾನದ ಅನುಕೂಲ ಮತ್ತು ಸೌಲಭ್ಯ ಅಪಾರ ಪ್ರಮಾಣದಲ್ಲಿದೆ. ಕೈ ಬೆರಳಿನ ತುದಿಯಲ್ಲಿ ದೊರೆಯುವ ಎಲ್ಲ ಮಾಹಿತಿಗಳೂ ಇಂದು ಜನತೆಗೆ ಪ್ರಾಕ್ಟಿಕಲ್ ಆಗಿ ತಲುಪುತ್ತಿಲ್ಲ ! ದುರಂತ ಎಂದರೆ ಇದು ಸರಿಯಾದ ಸಮಯದಲ್ಲಿ ಅವಶ್ಯಕವಿರುವ ವ್ಯಕ್ತಿಗೆ ಇದು ದೊರಕದಿರುವುದು. ಸರ್ಕಾರ ಆಲೋಚಿಸಿ ಸರಿಯಾದ ದಿಕ್ಕಿನಲ್ಲಿ ಕಾರ್ಯಮಗ್ನವಾಗಬೇಕಿರುವುದು ಈ ದಿಶೆಯಲ್ಲಿ .

Related Posts

Leave a Reply

Your email address will not be published. Required fields are marked *