ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯ ಪುತ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಾನಸ ಲೇಔಟ್ ನಲ್ಲಿರುವ ಮನೆಯಲ್ಲಿ ನಡೆದಿದೆ. ಕೃಷ್ಣ ಪಾಟೀಲ್ ( 25 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಭಾರತಿ- ಅಪ್ಪಾರಾವ್ ಮಾಲಿಪಾಟೀಲ್ ಪುತ್ರ ಅವರ ಮಗ ಕೃಷ್ಣ ಪಾಟೀಲ್. ಭಾರತಿ ಮಾಲಿಪಾಟೀಲ್ ವಿಜಯಪುರ ಜಿಲ್ಲೆಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನ ಸಿಟಿಒ ವಿಭಾಗದ ಅಧಿಕಾರಿ. ಇಂಜಿನಿಯರಿಂಗ್ ಮುಗಿಸಿದ್ದ ಕೃಷ್ಣ ಮಾಲಿಪಾಟೀಲ್ ಮಾನಸ ಲೇಔಟ್ ನ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ತಾಯಿ ವಿಜಯಪುರದಿಂದ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು. ಹಲವು ವರ್ಷಗಳಿಂದ ತಂದೆಯಿಲ್ಲದೆ ತಾಯಿ ಹಾಗೂ ಅಕ್ಕನೊಂದಿಗೆ ಬೆಳೆದಿದ್ದ ಕೃಷ್ಣ, ಸಿಂಗಲ್ ಪೇರೆಂಟ್ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ.
ಜೂನ್ 18 ರಂದು ತಾಯಿ ಮಗನಿಗೆ ಕರೆ ಮಾತಾಡಿದ್ದಾರೆ. ಅದಾದ ಬಳಿಕ ಎಷ್ಟು ಬಾರಿ ಕರೆ ಮಾಡಿದರೂ ಸ್ವಿಕರಿಸಲಿಲ್ಲ. ಜೂನ್ 18 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


