ಎರಡು ಕೋಟಿ ರೂ. ವಿಮೆ ಹಣ ಪಡೆಯುವುದಕ್ಕಾಗಿ ಚಿಕ್ಕೋಡಿಯಲ್ಲಿ ಮಾಜಿ ಸೈನಿಕನನ್ನು ಪತ್ನಿಯೇ ಕೊಂದಿರುವ ಘಟನೆಯೊಂದು ಬಹಿರಂಗಗೊಂಡಿದೆ. ಗಂಡನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿರುವ ಆರೋಪ ಗಂಡ ಇದ್ದಾಗಲೂ ಕೊಲೆಗಡುಕಿ ಪತ್ನಿ ಪ್ರಿಯಕರನ ಜೊತೆ ಓಡಾಡಿಕೊಂಡಿದ್ದಳು, ಪ್ರಿಯಕರನ ಜೊತೆ ಸೇರಿ ವಿಮೆ ದುಡ್ಡು ಪಡೆದುಕೊಳ್ಳಲು ಡನಿಗೆ ವಿಷವಿಕ್ಕಿ ಕೊಲೆ ಮಾಡಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿವೆ.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಡನಿಗೆ ಅಪಘಾತವಾದ ಸಂದರ್ಭವನ್ನು ಉಪಯೋಗಿಸಿಕೊಂಡ ಪತ್ನಿ ಆಸ್ಪತ್ರೆಯಲ್ಲೇ ಕೊಲೆ ಸಂಚು ಮಾಡಿ ಪ್ರಿಯಕರನ ಜೊತೆ ಸೇರಿ ಗ್ಲುಕೋಸ್ ಬಾಟಲ್ನಲ್ಲಿ ವಿಷ ಹಾಕಿ ಕೊಲೆಗೈದಿದ್ದಾಳೆ ಎನ್ನಲಾಗಿದೆ.
ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ (45) ಕೊಲೆಯಾದ ವ್ಯಕ್ತಿ, ಮೂರು ತಿಂಗಳ ಬಳಿಕ ಹೊತ್ತಿದ್ದ ಮೃತದೇಹವನ್ನು ಅಧಿಕಾರಿಗಳು ಹೊರತೆಗೆದು ಪರೀಕ್ಷೆಗೆ ಒಳಡಿಸಿದ ಬಳಿಕ ಈ ಸಾವಿನ ಹಿಂದಿನ ಸತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಹುಕ್ಕೇರಿಯಲ್ಲಿ ಲಕ್ಷ್ಮೀ ದೇವಿ ಜಾತ್ರೆ ನೋಡಿ ವಾಪಸ್ ಬರುವಾಗ ಸಂದೀಪ್ ಮಂಜರಗಿ ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಈ ಪತ್ನಿ ಸುಮಾ ಈ ಕೃತ್ಯ ಎಸಗಿದ್ದಾಳೆ. ಆಕೆ ಮೂರು ವರ್ಷಗಳಿಂದ ಪುಂಡಲಿಕ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪವಿದೆ. ಅನೈತಿಕ ಸಂಬಂಧ ಹೊರಬರಬಾರದು, ಗಂಡ ಸತ್ತರೆ ವಿಮೆ ಹಣ ಬರುತ್ತದೆ ಎಂದು ಕೊಲೆ ಮಾಡಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.


