Menu

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಬೀದಿ ನಾಯಿ ಹಿಂಡು ದಾಳಿ

ಬೆಂಗಳೂರಿನ ರಾಮಮೂರ್ತಿ ನಗರದ ಸಮೀಪ ಹೊಯ್ಸಳ ನಗರದಲ್ಲಿ ಏಕಾಏಕಿ 15ಕ್ಕೂ ಹೆಚ್ಚು ನಾಯಿಗಳ ಹಿಂಡು ವಿದ್ಯಾರ್ಥಿನಿ ಮೇಲೆ ದಾಳಿ ಮಾಡಿದೆ. ಮೇಘನಾ ಬೀದಿನಾಯಿಗಳ ದಾಳಿಗೆ ಒಳಗಾದ ವಿದ್ಯಾರ್ಥಿನಿ.

ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೀದಿನಾಯಿಗಳ ದಾಳಿಗೆ ವಿದ್ಯಾರ್ಥಿನಿ ಭಯಗೊಂಡಿದ್ದು, ಸ್ಥಳೀಯರು ಕೆಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ರಾಮಮೂರ್ತಿ ನಗರವಲ್ಲದೆ ಈ ಪ್ರದೇಶದ ಸುತ್ತಮುತ್ತ ಎಲ್ಲ ಬೀದಿಗಳಲ್ಲೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಜನ ನಡೆಯುವುದಕ್ಕೆ, ದ್ವಿಚಕ್ರವಾಹನದಲ್ಲಿ ಓಡಾಡುವುದಕ್ಕೆ ಭಯಪಡುವ ವಾತಾವರಣ ಇದೆ. ಈ ಪ್ರದೇಶದಲ್ಲಿ ಮೊದಲೇ ರಸ್ತೆಗಳು ಹದಗೆಟ್ಟು ಗುಂಡಿಗಳಿಂದ ತುಂಬಿದ್ದು, ಧೂಳಿನ ನಿತ್ಯ ಧೂಳಿನ ಸ್ನಾನ ಮಾಡಿಸುತ್ತಿವೆ. ಹದಗೆಟ್ಟ ರಸ್ತೆಯಲ್ಲಿ ಓಡಾಡಿ ಹಲವು ಆರೋಗ್ಯ ಸಮಸ್ಯೆಗಳ ಜೊತೆ ಬೀದಿ ನಾಯಿ ಕಾಟವೂ ಸೇರ್ಪಡೆಗೊಂಡು ಜನ ಸಾಮಾನ್ಯರ ಜೀವನ ದುಸ್ತರವೆನಿಸಿದೆ.

ಈ ಪ್ರದೇಶದ ಹಲವೆಡೆ ಚರಂಡಿ ವ್ಯವಸ್ಥೆ ಕೂಡ ಸರಿಯಾಗಿಲ್ಲದೆ ಸೊಳ್ಳೆಗಳ ತಾಣವಾಗಿದೆ. ಒಟ್ಟಿನಲ್ಲಿ ಮೂಲಸೌಕರ್ಯಗಳೇ ಇಲ್ಲದ ಈ ಪ್ರದೇಶದಲ್ಲಿ ಬೀದಿ ಣಾಯಿಗಳ ಕಾಟ ಸೇರಿದಂತೆ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತಕ್ಕೆ ದೂರು ನೀಡಿದರೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ ಎನ್ನುತ್ತಾರೆ ನಾಗರಿಕರು.

Related Posts

Leave a Reply

Your email address will not be published. Required fields are marked *