Menu

ಪ್ರಧಾನಿ ಹೇಳಿಕೆ ಹಾಗೂ ದೇಶದ ತಳಮಳ

ಚಿನ್ನದ ಖರೀದಿ ಮತ್ತು ಇಂಧನ ಬಳಕೆ ಸಂಬಂಧ ದೇಶದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ನೀಡಿದ ಬಹಿರಂಗ ಹೇಳಿಕೆ ದೇಶದ ಎಲ್ಲೆಡೆ ಈಗ ಚರ್ಚೆಗೆ ಗ್ರಾಸವಾಗಿದೆ.  ಮಹಿಳಾ ಮೀಸಲಾತಿ ವಿಧೇಯಕವು ಸಂಸತ್‌ನಲ್ಲಿ ಪರಾಭವಗೊಂಡಾಗ ದೇಶದ ಜನತೆಯನ್ನು ಉದ್ದೇಶಿಸಿ ದೂರದರ್ಶನ ಮತ್ತು ರೇಡಿಯೋ ಮೂಲಕ ಭಾಷಣ ಮಾಡಿದ ಪ್ರಧಾನಿ, ಆಗಲೇ ಈ ವಿಷಯವನ್ನು ಜನತೆಗೆ ತಿಳಿಸಬೇಕಿತ್ತಲ್ಲವೇ?

ಚಿನ್ನದ ಖರೀದಿ ಮತ್ತು ಇಂಧನ ಬಳಕೆ ಸಂಬಂಧ ದೇಶದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ನೀಡಿದ ಬಹಿರಂಗ ಹೇಳಿಕೆ ದೇಶದ ಎಲ್ಲೆಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ನಾಲ್ಕು ತಿಂಗಳಿಂದ ದೇಶವು ಮಧ್ಯ ಪ್ರಾಚ್ಯದಲ್ಲಿ ತಲೆದೋರಿದ ಯುದ್ಧದಿಂದ ದೇಶದ ಮೇಲೆ ಉಂಟಾದ ಜಾಗತಿಕ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರವೇಕೆ ವಾಸ್ತವಿಕ ಸಂಗತಿಗಳನ್ನು ಜನತೆಯ ಮುಂದೆ ಆಗಲೇ ಬಹಿರಂಗಪಡಿಸಲಿಲ್ಲ ಎಂಬ ಗಂಭೀರ ಪ್ರಶ್ನೆ ತಲೆದೋರಿದ್ದು ಇದಕ್ಕೆ ದೇಶದ ಪ್ರಧಾನಿಯಾದ ಮೋದಿ ಅವರ ಸಮಜಾಯಿಷಿ ಏನು ?

ಈಗ ದೇಶದ ಪ್ರಧಾನಿ ಆಡುತ್ತಿರುವ ಮಾತುಗಳು ನಾಲ್ಕು ತಿಂಗಳ ಹಿಂದೆ ಹೇಳಬೇಕಿತ್ತಲ್ಲವೇ ? ಈಗ ಪಂಚ ರಾಜ್ಯಗಳ ಚುನಾವಣೆ ಮುಗಿದಿದ್ದು ಜನತೆಯಲ್ಲಿ ಆತಂಕ ಹಾಗೂ ತಳಮಳ ಮೂಡಿಸುವ ಮಾತುಗಳನ್ನು ಪ್ರಧಾನಿ ಹೇಳಿರುವುದು ಗಂಭೀರ. ಚುನಾವಣೆಯ ಸಮಯದಲ್ಲಿ ಈಗ ಹೇಳಿದ ಮಾತುಗಳನ್ನು ಪ್ರಧಾನಿ ದೇಶದ ಜನತೆಯ ಮುಂದೆ ಹೇಳಿದಿದ್ದರೆ ಇದು ಪ. ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಬಿಜೆಪಿ ಗೆಲುವಿನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತಿತ್ತು.

ಚಿನ್ನ ಮತ್ತು ತೈಲ -ಇವೆರೆಡೂ ಭಾರತೀಯ ಸಮಾಜದಲ್ಲಿ ಅತಿ ಪ್ರಮುಖ ಪಾತ್ರವನ್ನು ವಹಿಸುವಂತಹ ವಸ್ತುಗಳು ಈ ವಿಚಾರದಲ್ಲಿ ಜನತೆಯಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಗಳು , ತಮ್ಮ ಕರ್ತವ್ಯವನ್ನು ನಿಭಾಯಿಸುವ ವಿಷಯದಲ್ಲಿ ತಪ್ಪುಗಳು ಮತ್ತು ದೋಷಗಳು ನುಸಳಬಾರದು, ಮಿಗಿಲಾಗಿ ಕೇಂದ್ರ ಸರ್ಕಾರವು ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ಆಲೋಚಿಸಿ, ಏಕಪಕ್ಷ ವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದರಿಂದ ಇದು ದೇಶದ ಜನತೆಯ ಮೇಲೆ ಬೀರುವ ಅಡ್ಡ ಪರಿಣಾಮಗಳ ಬಗ್ಗೆ ಆಲೋಚಿಸವೇಕಿದೆ.

ಯುದ್ದ ಪರಿಣಾಮಗಳು ಮತ್ತು ದೇಶದ ಮುಂದಿರುವ ಪ್ರಮುಖ ಸವಾಲುಗಳನ್ನು ಸರ್ಕಾರ ಸರ್ವಪಕ್ಷ ನಾಯಕರ ಸಭೆ ಅಥವಾ ವಿಶೇಷ ಸಂಸತ್ ಅಧಿವೇಶನ ವನ್ನು ಕರೆದು ವಿಪಕ್ಷ ನಾಯಕರ ಸಲಹೆ ಮತ್ತು ಸೂತ್ರಗಳನ್ನು ಸರ್ಕಾರ ಕಲೆ ಹಾಕಬೇಕಿತ್ತು. ಮಹಿಳಾ ಮೀಸಲಾತಿ ವಿಧೇಯಕವು ಸಂಸತ್‌ನಲ್ಲಿ ಪರಾಭವಗೊಂಡಾದ ದೇಶದ ಜನತೆಯನ್ನು ಉದ್ದೇಶಿಸಿ ದೂರದರ್ಶನ ಮತ್ತು ರೇಡಿಯೋ ಮೂಲಕ ಭಾಷಣ ಮಾಡಿದ ಪ್ರಧಾನಿ, ಆಗಲೇ ಈ ವಿಷಯವನ್ನು ಜನತೆಗೆ ತಿಳಿಸಬೇಕಿತ್ತಲ್ಲವೇ? ಒಟ್ಟಿನಲ್ಲಿ ಇದರಿಂದ ಇಂದು ಸ್ಪಷ್ಟವಾಗಿ ಗೋಚರಿಸುವ ಸಂಗತಿ ಎಂದರೆ ಕೇಂದ್ರ ಸರ್ಕಾರಕ್ಕೆ ಸಂಸದೀಯ ವ್ಯವಸ್ಥೆಯ ಮೇಲೆ ಇರಬೇಕಿರುವ ಗೌರವ ಮತ್ತು ನಂಬಿಕೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಯಿತೇ ಎಂಬ ಆತಂಕವೀಗ ದೇಶದಲ್ಲಿ ಶುರುವಾಗಿದೆ. ದೇಶದಲ್ಲಿ ಭಾರತೀಯ ಜನತಾ ಪಕ್ಷವೊಂದೇ ಗಟ್ಟಿಯಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ತನ್ನ ವಸಾಹತುಗಳನ್ನು ಬಲವಾಗಿ ಸ್ಥಾಪಿಸಿಕೊಳ್ಳಬೇಕೆಂಬ ಹಪಾಹಪಿ ಕಾರಣವಾಗಿ ಇಂದು ದೇಶದ ಜನತೆ ಸಂಕಷ್ಟ ಅನುಭವಿಸುವಂತಿದೆ. ಡೀಸೆಲ್ ಮತ್ತು ಪೆಟ್ರೋಲ್ ಅಭಾವ ಇಲ್ಲ ಎಂದು ಕೇಂದ್ರ ಸರ್ಕಾರವೀಗ ಪತ್ರಿಕಾ ಪ್ರಕಟಣೆ ನೀಡಿ ಸುಮ್ಮನೆ ಕುಳಿತುಕೊಳ್ಳುವುದಲ್ಲ. ದೇಶದ ವಾಣಿಜ್ಯ ಮಂತ್ರಿ ಈ ದಿಶೆಯಲ್ಲಿ ಜನತೆಗೆ ವಾಸ್ತವವನ್ನು ತೆರೆದಿಡುವ ಕೆಲಸವನ್ನು ಮಾಡಬೇಕಿದೆ.

Related Posts

Leave a Reply

Your email address will not be published. Required fields are marked *