Tuesday, September 29, 2026
Menu

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹೊಲಿಗೆ ಹಾಕದೆ ಡಿಸ್ಟಾರ್ಜ್‌: ನರಳಿ ಪ್ರಾಣ ಬಿಟ್ಟ ರೋಗಿ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (ಶಾಂತವೇರಿ ಗೋಪಾಲಗೌಡ ಆಸ್ಪತ್ರೆ) ವೈದ್ಯರ ಅಮಾನವೀಯತೆ ಮತ್ತು ನಿರ್ಲಕ್ಷ್ಯದಿಂದ ರೋಗಿಯು ನರಳಿ ಪ್ರಾಣಬಿಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ.

ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ 45 ವರ್ಷದ ಶಾ ನವಾಜ್‌ಗೆ ಮರ್ಮಾಂಗದಲ್ಲಿ ಗಡ್ಡೆ ಬೆಳೆದಿದ್ದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಒಂದೂವರೆ ತಿಂಗಳ ಹಿಂದೆ ತುರ್ತು ವಿಭಾಗಕ್ಕೆ ಅವರನ್ನು ಅಡ್ಮಿಟ್​​ ಮಾಡಿಕೊಳ್ಳಲಾಗಿತ್ತು. ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದರು. ಚಿಕಿತ್ಸೆಗಾಗಿ ಮರ್ಮಾಂಗ ಭಾಗದಲ್ಲಿ ಕತ್ತರಿಸಿಲಾಗಿದ್ದು, ಕೆಲವು ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು. ಆದರೆ ಕತ್ತರಿಸಿದ್ದ ಗಾಯ ಇನ್ನೂ ಗುನವಾಗಿಲ್ಲ ಎಂದು ಸರ್ಜರಿ ವಿಭಾಗದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಾಯಿಸಲಾಗಿದೆ.ಕತ್ತರಿಸಿದ್ದ ಜಾಗದಲ್ಲಿ ಹೊಲಿಗೆ ಮಾಡದೆ ಸಿಬ್ಬಂದಿ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.

ಎಷ್ಟೇ ಕೇಳಿಕೊಂಡರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಅಡ್ಮಿಟ್ ಮಾಡಿಕೊಳ್ಳದ ಕಾರಣ ಮೂರು ದಿನ ಪತ್ನಿ ಜೊತೆ ರೋಗಿ ಫುಟ್​​ಪಾತ್​​ನಲ್ಲೇ ಇದ್ದರು. ಕತ್ತರಿಸಿದ ಜಾಗದಿಂದ ರಕ್ತ ಸುರಿಯುತ್ತಲೇ ಇದ್ದು, ನೋವು ತಾಳಲಾಗದೆ ನವಾಜ್ ನರಳಿ ಪ್ರಾಣ ಬಿಟ್ಟಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪದ ಬಗ್ಗೆ ತನಿಖೆಗೆ ತಜ್ಞರ ಸಮಿತಿ ನೇಮಿಸಿದ್ದು, ಸಮಿತಿ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ದೀಪಕ್ ತಿಳಿಸಿದ್ದಾರೆ.
ನವಾಜ್ ಮೃತಪಟ್ಟ ಬಗ್ಗೆ ಅವರ ಪೋಷಕರು ಮಾಹಿತಿ ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲೂ ಬಲವಂತವಾಗಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ವೈದ್ಯರ ತಪ್ಪಿನಿಂದಾಗಿ ಸಾವು ಆಗಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *