ಭಾರತವು ಇರಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಯುದ್ಧಪೀಡಿತ ದೇಶದಿಂದ ‘ಕೂಡಲೇ ಹೊರಹೋಗುವಂತೆ’ ತುರ್ತು ಸಂದೇಶ ನೀಡಿದೆ. ಎಕ್ಸ್ ಖಾತೆಯಲ್ಲಿ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತಾವು ಸೂಚಿಸಿದ ಮಾರ್ಗಗಳನ್ನು ಬಳಸಿಕೊಂಡು ದೇಶವನ್ನು ತೊರೆಯುವಂತೆ ಕೇಳಿಕೊಂಡಿದೆ.
ಇರಾನ್ ವಿರುದ್ಧ ಅಮೆರಿಕ ಸೇನೆಯ ‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳ ನಂತರ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರು ಕೂಡಲೇ ದೇಶವನ್ನು ಬೇಗನೆ ತೊರೆಯುವಂತೆ ತುರ್ತು ಸಲಹೆಯನ್ನು ನೀಡಿದೆ.
ರಾಯಭಾರ ಕಚೇರಿಯೊಂದಿಗೆ ಪೂರ್ವ ಸಮಾಲೋಚನೆ ಮತ್ತು ಸಮನ್ವಯವಿಲ್ಲದೆ ಯಾವುದೇ ಅಂತರರಾಷ್ಟ್ರೀಯ ಭೂ ಗಡಿಯನ್ನು ಸಮೀಪಿಸಲು ಪ್ರಯತ್ನಿಸಬಾರದು ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದೆ.
ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯಾಣಗಳನ್ನು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದೆ. ಕದನ ವಿರಾಮ ಘೋಷಣೆಯ ನಂತರವೂ ಇರಾನ್‌ನಲ್ಲಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು ಎಂದು ಪರೋಕ್ಷವಾಗಿ ಎಚ್ಚರಿಸಲಾಗಿದೆ.
ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಂಪರ್ಕ ಸಂಖ್ಯೆಗಳನ್ನು ಪರಕಟಿಸಿದೆ. +989128109115, +989128109102, +989128109109, +989932179359. ನಿರ್ಗಮನ ಯೋಜನೆ ರೂಪಿಸುವಾಗ ಭಾರತೀಯ ನಾಗರಿಕರು ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಕೋರಲಾಗಿದೆ.


