Menu

ಪ್ರಿಯಕರ ಧನ್‌ರಾಜ್‌ ಜೊತೆ ಸೇರಿ 2ನೇ ಗಂಡ ಮನ್ಸೂರ್‌ನ ಕೊಲೆಗೈದ ಫರ್ಜಾನ

ತುಮಕೂರಿನ ತಿಪಟೂರು ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ನಡೆದಿದ್ದ ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆತನ ಪತ್ನಿ ಫರ್ಜಾನ ಎಂಬುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮದುವೆಯಾಗಿ ಮೂರು ತಿಂಗಳು ಕಳೆಯುವುದರ ಒಳಗೆ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಫರ್ಜಾನ (31), ಧನರಾಜ್ (24) ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮನ್ಸೂರ್ ಪಾಷ ಜನವರಿಯಲ್ಲಿ ಫರ್ಜಾನ ಎಂಬಾಕೆಯನ್ನು ಮದುವೆಯಾಗಿದ್ದ. ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ ಮನ್ಸೂರ್ ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲೆಂದು ಹೋದವ ನಾಪತ್ತೆಯಾಗಿದ್ದ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ತನಿಖೆ ವೇಳೆ ಚಿಕ್ಕಮಗಳೂರಿನ ಯುವಕರ ಗ್ಯಾಂಗ್ ಕೃತ್ಯ ಎಸಗಿರುವುದು ಗೊತ್ತಾಗಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಮನ್ಸೂರ್‌ ಪತ್ನಿ ಫರ್ಜಾನ ಕೊಲೆ ಮಾಡಿಸಿರುವ ವಿಚಾರ ಬಯಲಾಗಿದೆ. ಧನರಾಜ್​​ ಎಂಬಾತನ ಜೊತೆ ಮನ್ಸೂರ್​​ ಪತ್ನಿ ಫರ್ಜಾನ್ ಪ್ರೇಮ ಸಂಬಂಧ ಹೊಂದಿದ್ದಳು. ಈ ಮೊದಲು ಫರ್ಜಾನಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು, ಗಂಡ ಮೃತಪಟ್ಟಿದ್ದ. ಒಂಟಿಯಾಗಿದ್ದ ಫರ್ಜಾನ ಅಕ್ಕನ ಭೇಟಿಗೆಂದು ಚಿಕ್ಕಮಗಳೂರಿಗೆ ತೆರಳುತ್ತಿದ್ದಳು. ಅಕ್ಕ ವೆಂಕಟೇಶ್​​ ಜೊತೆ ಸಂಬಂಧ ಹೊಂದಿದ್ದಳು, ಆತನ ಮೂಲಕ ಫರ್ಜಾನಗೆ ಧನರಾಜ್ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಜೋಡಿ ಚಿಕ್ಕಮಗಳೂರಿನ ತುಂಬ ಓಡಾಡಿದ್ದು, ತಿಪಟೂರಿನ ರೈಲು ನಿಲ್ದಾಣದ ಬಳಿ ಸಿಕ್ಕಿಬಿದ್ದಿದ್ದರು. ಬಳಿಕ ಮನ್ಸೂರ್​​ ಜೊತೆ ಫರ್ಜಾನ ವಿವಾಹ ನಡೆದಿದೆ.

ಮದುವೆ ಬಳಿಕ ಫರ್ಜಾನ ಹೊಸ ಸಿಮ್ ಖರೀದಿ ಮಾಡಿ ಧನರಾಜ್​​ನನ್ನು ಸಂಪರ್ಕಿಸಿ, ಮತ್ತೆ ತಾವು ಒಂದಾಗಬೇಕೆಂದು ಬಯಸಿ ಮನ್ಸೂರ್​​ ಕೊಲೆಗೆ ಸಂಚು ರೂಪಿಸಿದ್ದಳು. ಮಾರ್ಚ್ 4ರಂದು ಗುಜರಿ ವಸ್ತು ಇದೆ ಎಂದು ಮನ್ಸೂರ್​​ಗೆ ಕರೆ ಮಾಡಿ ಆರೋಪಿಗಳು ಕರೆಸಿಕೊಂಡು ಹಲ್ಲೆ ಮಾಡಿ ಕೊಲೆಗೈದಿದ್ದರು. ಮನ್ಸೂರ್​​ಗೆ ಆರೋಪಿ ದರ್ಶನ್​​ ಮಾಡಿದ್ದ ಕರೆಯಿಂದ ಎಲ್ಲರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Related Posts

Leave a Reply

Your email address will not be published. Required fields are marked *