ಸಿಂಧನೂರಿನಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತ ಶಿಶು ಮೃತಪಟ್ಟಿದ್ದು, ಮಗು ಸಾವಿಗೆ ಆಸ್ಪತ್ರೆ ವೈದ್ಯರು ಸಿಬ್ಬಂದಿ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರೌ ಡಕುಂದ ಗ್ರಾಮದ ಅಮರೇಶ ಹಿರೇಮಠ್ ಅವರ ಪತ್ನಿ ಚಂದ್ರಿಕಾ ಅವರ ಹೆರಿಗೆ ವೇಳೆ ಮಗು ಮೃತಪಟ್ಟಿದೆ . ಮಗುವಿನ ಸಾವಿಗೆ ಕಾರಣದವರನ್ನು ಕೂಡಲೇ ಪೊಲೀಸ್ ಬಂಧಿಸಬೇಕು ಹಾಗೂ ಮುಂದೆ ಇಂಥ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಗರ್ಭಿಣಿ ಶುಕ್ರವಾರ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ, ತಾಯಿಯ ಹೊಟ್ಟೆಯಲ್ಲಿ ಮಗುವಿಗೆ ಕರುಳು ಸುತ್ತಿಕೊಂಡಿದ್ದಲ್ಲದೆ ಇನ್ನಿತರ ಸಮಸ್ಯೆಗಳಿಂದ ಮಗು ಮೃತಪಟ್ಟಿದೆ, ಮಗುವಿನ ತಾಯಿ ಆರೋಗ್ಯವಾಗಿ ಇದ್ದಾರೆ, ಎಲ್ಲಾ ರೀತಿಯ ಚಿಕಿತ್ಸೆ ನೀಡಿ ದ್ದೇವೆ, ಆಸ್ಪತ್ರೆ ಆರಂಭ ಆಗಿನಿಂದಲೂ ಇಲ್ಲಿವರೆಗೆ ಅನೇಕ ಹೆರಿಗೆ ಮಾಡಿಸಿದ್ದೇವೆ ಈ ರೀತಿ ಆಗಿಲ್ಲ ಎಂದು ಸಿಂಧನೂರು ತಾಯಿ ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವ ಹೇಳಿದ್ದಾರೆ.
ಸರಿಯಾಗಿ ವೈದ್ಯರು ಕಾರ್ಯ ನಿರ್ವಹಿಸದ ಕಾರಣ ಮಗು ಮೃತಪಟ್ಸಾಟಿದೆ. ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಮೊದಲಿಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ನನ್ನ ಕುಟುಂಬದವರು ಹೇಳಿದರು, ಅವರ ಮಾತು ನಾನು ಕೇಳದೆ ಸರ್ಕಾರಿ ಆಸ್ಪತ್ತಿಗೆ ಬಂದಿದ್ದೆ ನನ್ನದು ದೊಡ್ಡ ತಪ್ಪು ಆಯ್ತು, ನನ್ನ ಮಗುವಿಗೆ ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದು ಮಗುವಿನ ತಂದೆ ಅಮರೇಶ ಹಿರೇಮಠ್ ಹೇಳಿದ್ದಾರೆ.


