Menu

ಅತ್ತೆಯ ಕಿರುಕುಳ ಆರೋಪ: ಮೂರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ ಯತ್ನ

ಮೂರು ಮಕ್ಕಳನ್ನು ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಅತ್ತೆ ರೇಣವ್ವ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ನೊಂದು ರೂಪಾ ಹನಮಂತ ಗೌಡರ (27) ಈ ಕೃತ್ಯಕ್ಕೆ ಮುಂದಾಗಿದ್ದರು ಎಂದು ಹೇಳಲಾಗಿದೆ.

ರೂಪಾ ಹನಮಂತ ಗೌಡರ ಮನೆಯಲ್ಲಿ ಮಕ್ಕಳಾದ ಸಮೃದ್ಧಿ ಹನುಮಂತ ಗೌಡರ(5), ಪ್ರೀತಮ್ ಹನುಮಂತ ಗೌಡರ(4), ಸುಕ್ಷಿತ್ ಹನುಮಂತ ಗೌಡರ(2) ಅವರಿಗೆ ಹಗ್ಗದಿಂದ ನೇಣುಬಿಗಿದು ಸಾಯಿಸಿದ್ದಾರೆ. ನಂತರ ತಾನು ಡೀಸೆಲ್‌ ಸೇವಿಸಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೨೦೧೮ರಲ್ಲಿ ರೂಪಾ ಮತ್ತು ಹನುಮಂತಗೌಡರ ಮದುವೆಯಾಗಿದ್ದರು. ಹನುಮಂತ ಬಾದಾಮಿಯ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮದುವೆಯಾದ ದಿನಗಳಿಂದಲೂ ರೂಪಾ ಮತ್ತು ಅತ್ತೆ ರೇಣವ್ವ ಮಧ್ಯೆ ಹೊಂದಾಣಿಕೆಯೇ ಇರಲಿಲ್ಲ, ಸದಾ ಕಿತ್ತಾಟ, ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *