Thursday, January 30, 2025
Menu

ಒಂದು ಕೋಟಿಗೆ ವಾಪಸ್‌ 5 ಕೋಟಿ ಎಂದು ನಂಬಿಸಿ ಉದ್ಯಮಿಗೆ 25.75 ಕೋಟಿ ರೂ. ನಾಮ

ತನ್ನ ಬ್ಯಾಂಕ್ ಖಾತೆಗೆ ಬೇರೊಬ್ಬರು ಹಾಕಿರುವ ಹಣ ಡ್ರಾ ಮಾಡುವ ಮೊದಲು ತೆರಿಗೆ ಮೊತ್ತ ಒಂದು ಕೋಟಿ ರೂ. ಪಾವತಿಸಬೇಕಿದೆ. ಅದಕ್ಕೆಂದು ಒಂದು ಕೋಟಿ ರೂ. ನೀಡಿದರೆ ವಾಪಸ್‌ 5 ಕೋಟಿ ರೂ. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 25.75 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿ 3 ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೇಖಾ, ಪತಿ ಮಂಜುನಾಥಚಾರಿ ಮತ್ತು ಚೇತನ್ ಬಂಧಿತರು. ಉದ್ಯಮಿ ನಿಸಾರ್ ಅಹಮ್ಮದ್ ನೀಡಿದ ದೂರು ಆಧರಿಸಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ ರೇಖಾ ಸಾಲ ಕೊಡಿಸುತ್ತಿದ್ದಳು. ಈ ಬಗ್ಗೆ ತಿಳಿದುಕೊಂಡಿದ್ದ ಉದ್ಯಮಿ ನಿಸಾರ್‌ ಈಕೆಯನ್ನು ಸಂಪರ್ಕಿಸಿ ಸಾಲ ಕೊಡಿಸುವಂತೆ ಕೇಳಿದ್ದರು. ಆಗ ರೇಖಾ ಮತ್ತು ಸಹಚರರು ನಿಸಾರ್ ಅವರರನ್ನು ವಂಚಿಸಲು ಸಂಚು ರೂಪಿಸಿದ್ದಾರೆ.

2010ರಲ್ಲಿ ನಡೆದ ಕಾರ್ಲಟನ್ ಟವರ್ ಅಗ್ನಿ ದುರಂತ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಕಾರ್ಲಟನ್ ಟವರ್ ಮಾಲೀಕರು ನನ್ನ ಖಾಸಗಿ ಅಕೌಂಟ್‌ಗೆ 25 ಕೋಟಿ ರೂ. ಹಾಕಿದ್ದಾರೆ. ಈ ಹಣ ಡ್ರಾ ಮಾಡಲು ನಾನು ತೆರಿಗೆ ಪಾವತಿಸಬೇಕು. ಹೀಗಾಗಿ ನೀವು 1 ಕೋಟಿ ಕೊಟ್ಟರೆ ನಾನು 5 ಕೋಟಿ ಕೊಡುವುದಾಗಿ ರೇಖಾ ಆಮಿಷವೊಡ್ಡಿದ್ದಳು. ನಂಬಿದ ನಿಸಾರ್, ಆರೋಪಿಗಳಿಗೆ 5.75 ಕೋಟಿ ನೀಡಿದ್ದಾರೆ. ಬಳಿಕ ಯಾವುದೇ ಹಣ ನೀಡದೆ ರೇಖಾ ಮತ್ತು ಸಹಚರರು ವಂಚಿಸಿದಾಗ ನಿಸಾರ್ ಸಿಸಿಬಿಗೆ ದೂರು ನೀಡಿದ್ದರು.

ಆರೋಪಿ ರೇಖಾ ವಿರುದ್ದ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ. 3 ವರ್ಷದ ಹಿಂದೆ ಮಾಜಿ ಸಚಿವ ರಾಜೂ ಗೌಡ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಕೆಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದಳು. ಈ ಸಂಬಂಧ ಸುರಪುರ ಠಾಣೆ ಪೊಲೀಸರು ರೇಖಾಳನ್ನು ಬಂಧಿಸಿದ್ದರು.

Related Posts

Leave a Reply

Your email address will not be published. Required fields are marked *