Menu

ಪಂಚಭೂತಗಳಲ್ಲಿ ಲೀನವಾದ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ

ಅಂಕೋಲಾ: ಸಾವಿರಾರು ಜಾನಪದ ಹಾಡುಗಳಿಗೆ ದನಿಯಾಗಿ ಹಾಲಕ್ಕಿ ಜಾನಪದ ಕಂಪನ್ನು ದೇಶದ್ಯಂತ ಪಸರಿಸಿದ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪುರಸ್ಕರತ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ (88) ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರುವಾರ ಸಂಜೆ ಸರ್ಕಾರಿ ಗೌರವಾಧರಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಸ್ಥಳೀಯ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಸಾವಿರಾರು ಹಾಡುಗಳ ಒಡತಿಯಾಗಿ ತಾಲೂಕಿನ ಜನಪದ ಸೊಗಡನ್ನು ದೇಶಕ್ಕೆ ಪರಿಚಯಿಸಿ ಗಮನ ಸೆಳೆದಿದ್ದ ತಾಲೂಕಿನ ಬಡಗೇರಿಯ ಸುಕ್ರಿ