Menu

ಕುಂಭಮೇಳ ಕಾಲ್ತುಳಿತಕ್ಕೆ ಬಲಿಯಾದ ನಾಲ್ವರ ಮೃತದೇಹ ಬೆಳಗಾವಿಗೆ

ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಂಟಾಗಿರುವ ಕಾಲ್ತುಳಿತಕ್ಕೆ ಐವತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಲಿಯಾಗಿರುವವರಲ್ಲಿ ಬೆಳಗಾವಿಯ ನಾಲ್ವರ ಮೃತದೇಹ ಇಂದು (ಗುರುವಾರ) ಸಂಜೆ ಬೆಳಗಾವಿಗೆ ತಲುಪಲಿದೆ. ಇಂದೇ ಅಂತ್ಯ ಸಂಸ್ಕಾರ ಕೂಡ ನಡೆಯಲಿದೆ. ಮೃತದೇಹಗಳನ್ನು ಪ್ರಯಾಗ್‌ರಾಜ್‌ ನಿಂದ ದೆಹಲಿಗೆ ತಂದ ಬಳಿಕ ಅಲ್ಲಿಂದ ವಿಮಾನದಲ್ಲಿ ಬೆಳಗಾವಿಗೆ ತರಲಾಗುತ್ತಿದೆ. ವಡಗಾವಿಯ ‌ನಿವಾಸಿ ಜ್ಯೋತಿ ಹತ್ತರವಾಠ್, ಮೇಘ. ಹತ್ತರವಾಠ್‌, ಶಿವಾಜಿ ನಗರದ ನಿವಾಸಿ‌ ಮಹಾದೇವಿ‌ ಬಾವನೂರ ಹಾಗೂ ಶೆಟ್ಟಿ ‌ಗಲ್ಲಿಯ

ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಹತ್ತು ಮಂದಿ ಬಲಿ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಮೌನಿ ಅಮಾವಾಸ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಧಾವಿಸುತ್ತಿದ್ದು, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ನಡೆದಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನ