Menu

ಮಾಜಿ ಐಪಿಎಸ್‌ ಭಾಸ್ಕರ್‌ ರಾವ್‌ ಸೋದರಳಿಯ ನಾಪತ್ತೆ

ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೋದರ ಅಳಿಯ ಅನಿರುದ್ಧ್ ರಮೇಶ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಸಹಾಯ ಕೋರಿದ್ದಾರೆ. ಭಾಸ್ಕರ್ ರಾವ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಅನಿರುದ್ಧ್ ದಕ್ಷಿಣ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹನುಮಂತನಗರದಲ್ಲಿ ವಾಸವಿದ್ದರು. 6 ಅಡಿ 2 ಇಂಚು ಎತ್ತರವಿದ್ದು,ಶಾಂತ ಸ್ವಭಾವದ ವ್ಯಕ್ತಿ ಎಂದು ಮಾಹಿತಿ ಶೇರ್‌ ಮಾಡಿದ್ದಾರೆ. ನನ್ನ

ಮೂರು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಮಧುಗಿರಿ ತಾಲೂಕಿನಲ್ಲಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಧು (38) ಎಂಬ ವ್ಯಕ್ತಿ ಬೈಕ್ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ಮಧುಗಿರಿಯ ಹೊಸಕೆರೆ-ನೇರಳೆಕೆರೆ ರಸ್ತೆಯಲ್ಲಿರುವ ಲಕ್ಷ್ಮೀದೇವಿಪುರ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ. ಇವರು ಕಾಣೆಯಾಗಿದ್ದ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.