Man jumps river
ಪತ್ನಿ, ಮಕ್ಕಳು ತೊರೆದಿರುವ ನೋವು: ಮಾಂಜ್ರಾ ನದಿಗೆ ಹಾರಿದ ವ್ಯಕ್ತಿ
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಕೆಲವು ವರ್ಷದ ಹಿಂದೆ ಮಕ್ಕಳು ಮತ್ತು ಹೆಂಡತಿ ಬಿಟ್ಟು ಹೋಗಿದ್ದಕ್ಕೆ ನೊಂದಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದು, ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ ಹಾರಿದ್ದಾನೆ. ವ್ಯಕ್ತಿಯು ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ ಜಿಗಿಯುತ್ತಿರುವ ವೀಡಿಯೊ ಹರಿದಾಡಿದ್ದು, ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ನದಿಗೆ ಹಾರಿದ ವ್ಯಕ್ತಿ. ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಪ್ರಭಾಕರ್ ಸೂರ್ಯವಂಶಿಗಾಗಿ ಅಗ್ನಿಶಾಮಕ


