Menu

ಕೆಂಬಣ್ಣದಲ್ಲಿ ಚಂದ್ರ ಗೋಚರ: ಕಣ್ತುಂಬಿಕೊಳ್ಳಲು ಬರಿಗಣ್ಣೇ ಸಾಕು!

ಬೆಂಗಳೂರು:ಇದೇ ಭಾನುವಾರ ರಾತ್ರಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಗೋಚರವಾಗಲಿದೆ. ಈ ಅಪರೂಪದ ಕ್ಷಣವನ್ನು ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾಗಿದೆ. ಈ ನೆರಳಿನ ಆಟವನ್ನು ಕಣ್ಣುಂಬಿಕೊಳ್ಳುವ ಅಪೂರ್ವ ಕ್ಷಣ. ಎಲ್ಲರೂ ಹೊರಗೆ ಬಂದು ಈ ಗ್ರಹಣವನ್ನು ಆನಂದಿಸಬೇಕು ಎಂದು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರುಜ್‌ ಮೋಹನ್‌ ರಾಮಾನುಜಂ, ಜವಾಹರಲಾಲ್‌ ನೆಹರು ತಾರಾಲಯ‌ದ ನಿರ್ದೇಶಕ ಬಿ.ಆರ್‌.ಗುರುಪ್ರಸಾದ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸೂರ್ಯ ಮತ್ತು ಚಂದ್ರರ ನಡುವೆ