Live in Relationship
ಲಿವ್ ಇನ್ ರಿಲೇಷನ್‌ಶಿಪ್: ಮತಾಂತರಗೊಳ್ಳದಿದ್ದರೆ ಕೊಲೆಗೈಯುವುದಾಗಿ ಯುವತಿಗೆ ಬೆದರಿಕೆ
ಬೆಂಗಳೂರಿನಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಲಿವಿಂಗ್ ಟುಗೆದರ್ ಸಂಗಾತಿಗಳಾಗಿದ್ದು, ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಯುವಕ ಮತಾಂತರಕ್ಕೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ್ದಾನೆ. ಮತಾಂತರಕ್ಕೆ ಒಪ್ಪದಿದ್ದರೆ ದೆಹಲಿ ಪ್ರಕರಣದಂತೆ ಕೊಲೆಗೈದು ಪೀಸ್ ಪೀಸ್ ಮಾಡಿ ಎಸೆಯುವುದಾಗಿ ಬೆದರಿಸಿ, ಲಕ್ಷಾಂತರ ರೂ. ವಂಚಿಸಿದ್ದಾನೆಂದು ಸಂತ್ರಸ್ತೆ ದೂರು ನೀಡಿದ್ದಾಳೆ. ದೂರು ನೀಡಿದ್ದರೂ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾಳೆ. ಸಂತ್ರಸ್ತ ಯುವತಿ ಉಸ್ಮಾನ್ ಎಂಬ ಯುವಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.


