Menu

ಲಿಟಿಗೇಷನ್‌ ಮುಕ್ತ ನೇಮಕಾತಿಯೇ ಸರ್ಕಾರದ ಮುಂದಿನ ದೊಡ್ಡ ಸವಾಲು

ಸರ್ಕಾರದ ಮೇಲೆ ಯುವಜನತೆಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ಉಂಟಾಗುವುದು ಘೋಷಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ, ಯಾವ ಲಿಟಿಗೇಷನ್ ಚಕ್ರವ್ಯೂಹಕ್ಕೂ ಸಿಲುಕದೆ ಇದು ಪೂರ್ಣಗೊಂಡಾಗ ಮಾತ್ರ. ಸರ್ಕಾರವೀಗ ಘೋಷಿಸಿರುವ ಹುದ್ದೆಗಳ ಭರ್ತಿ ಯುವ ಸಮೂಹಕ್ಕೆ ಬಹುದೊಡ್ಡ ಪರಿಹಾರ ಎಂಬುದು ಗೋಚರಿಸಿದರೂ, ಕಾನೂನು ಪ್ರಕಾರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಕೆಲವೊಂದು ತೊಡಕುಗಳಿವೆ. ಸರ್ಕಾರಿ ನೌಕರಿಗಾಗಿ ಚಾತಕಪಕ್ಷಿಗಳಂತಿದ್ದ ನಾಡಿನ ಅರ್ಧಕೋಟಿ ಯುವಕ, ಯುವತಿಯರ ಬದುಕಿನಲ್ಲಿ ಆಸೆ ಚಿಗುರಿದೆ. ಎರಡು ದಿನಗಳ ಹಿಂದೆ ರಾಜ್ಯ